ADVERTISEMENT

ಹೆತ್ತವರೇ ಮಾರಾಟ ಮಾಡಿದ್ದ 2 ತಿಂಗಳ ಮಗು ರಕ್ಷಿಸಿದ ಪೊಲೀಸರು

ಪಿಟಿಐ
Published 24 ಮೇ 2020, 19:18 IST
Last Updated 24 ಮೇ 2020, 19:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್:ಆರ್ಥಿಕ ಸಂಕಷ್ಟದಿಂದ ಹೆತ್ತವರು ₹ 22 ಸಾವಿರಕ್ಕೆ ಮಾರಾಟ ಮಾಡಿದ್ದಎರಡು ತಿಂಗಳ ಗಂಡು ಮಗುವನ್ನು ಹೈದರಾ ಬಾದ್‌ ಪೊಲೀಸರು ಭಾನುವಾರ ರಕ್ಷಿಸಿದ್ದಾರೆ.

‘ಆರ್ಥಿಕ ಸಂಕಷ್ಟ ಹಾಗೂ ಮಗುವಿನ ತಂದೆಯ ಕುಡಿತದ ಚಟದಿಂದ ಪೋಷಕರು ಶನಿವಾರ ರಾತ್ರಿ ಮಗು ಮಾರಾಟ ಮಾಡಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಪೊಲೀಸರು ತಿಳಿಸಿದರು. ಆದರೆ ಈ ಆರೋಪವನ್ನು ಮಗುವಿನ ತಾಯಿ ನಿರಾಕರಿಸಿದ್ದು, ಕುಡಿತದ ಚಟ ಹೊಂದಿದ್ದ ಗಂಡನೇ ಮಗು ಮಾರಾಟ ಮಾಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಮಗು ಖರೀದಿಸಿದ್ದ ಮಹಿಳೆ ಮತ್ತು ಪೋಷಕರನ್ನು ವಶಕ್ಕೆ ಪಡೆಯಲಾಗಿದೆ. ಖರೀದಿ ಸಂದರ್ಭದಲ್ಲಿ ಸಾಕ್ಷಿಯಾಗಿ ಬಾಂಡ್‌ ಕಾಗದಕ್ಕೆ ಸಹಿ ಹಾಕಿದ್ದ ಮೂವರು ಪರಾರಿಯಾಗಿದ್ದು ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಆಂಬುಲೆನ್ಸ್‌ ಚಾಲಕ ಸಾವು: ₹ 75 ಲಕ್ಷ ಪರಿಹಾರ

ಥಾಣೆ: ನವಿಮುಂಬೈನ ವಾಶಿಯಲ್ಲಿರುವ ನಗರ ಪಾಲಿಕೆ ಆಸ್ಪತ್ರೆಯ ಆಂಬುಲೆನ್ಸ್‌ನ ಚಾಲಕರೊಬ್ಬರು ಕೋವಿಡ್‌–19ನಿಂದಾಗಿ ಭಾನುವಾರ ಮೃತಪಟ್ಟಿದ್ಧಾರೆ.

‘ಮೃತ ಚಾಲಕನ ಕುಟುಂಬಕ್ಕೆ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ವಿಮಾ ಯೋಜನೆಯಡಿ ₹ 50 ಲಕ್ಷ ಹಾಗೂ ನಗರಪಾಲಿಕೆಯ ಕಾರ್ಮಿಕ ಕಲ್ಯಾಣ ನಿಧಿಯಿಂದ ₹ 25 ಲಕ್ಷ ಸೇರಿ ಒಟ್ಟು ₹ 75 ಲಕ್ಷ ಪರಿಹಾರ ವಿತರಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಅಣ್ಣಾಸಾಹೇಬ ಮಿಸಾಳ್‌ ಹೇಳಿದ್ದಾರೆ.

ಕ್ರಿಶ್ಚಿಯನ್‌ ಮಿಷಲ್‌ ತನಿಖೆಗೆ ಅನುಮತಿ

ನವದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ ಸಂಬಂಧ ತಿಹಾರ್‌ ಜೈಲಿನಲ್ಲಿರುವ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷಲ್‌‌ ಅವರನ್ನು ತನಿಖೆಗೆ ಒಳಪಡಿಸಲು ಇ.ಡಿಗೆ ದೆಹಲಿ ಹೈಕೋರ್ಟ್‌ ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.