ADVERTISEMENT

ಹೈದರಾಬಾದ್‌: ಗರ್ಭಿಣಿ ಪತ್ನಿಯನ್ನು ಕೊಂದು, ದೇಹವನ್ನು ತುಂಡರಿಸಿ ನದಿಗೆಸೆದ ಪತಿ

ಪಿಟಿಐ
Published 24 ಆಗಸ್ಟ್ 2025, 16:28 IST
Last Updated 24 ಆಗಸ್ಟ್ 2025, 16:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹೈದರಾಬಾದ್‌: ಐದು ತಿಂಗಳ ಗರ್ಭಿಣಿ ಪತ್ನಿಯನ್ನು ಪತಿಯೇ ಹತ್ಯೆ ಮಾಡಿ, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಂತರ ‘ಮೂಸಿ’ ನದಿಗೆ ಎಸೆದ ಪ್ರಕರಣ ಹೈದರಾಬಾದ್‌ನಲ್ಲಿ ನಡೆದಿದೆ.

ಶನಿವಾರ ಸಂಜೆ 4.30ಕ್ಕೆ ಪ್ರಕರಣ ನಡೆದಿದೆ. 27 ವರ್ಷದ ವ್ಯಕ್ತಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. 21 ವರ್ಷದ ಪತ್ನಿ ಜೊತೆಗೆ ನಿರಂತರ ಜಗಳ ನಡೆದಿದ್ದರಿದ ಈ ಕುಕೃತ್ಯವೆಸಗಿದ್ದಾನೆ.

ADVERTISEMENT

‘ಸಾಕ್ಷಿಯನ್ನು ಮರೆಮಾಚುವ ಉದ್ದೇಶದಿಂದ ಹೆಕ್ಸಾ ಬ್ಲೇಡ್‌ನಿಂದ ಪತ್ನಿಯ ತಲೆ, ಕಾಲು ಹಾಗೂ ಕಾಲು ಕತ್ತರಿಸಿ ಮೂಸಿ ನದಿಗೆ ಎಸೆದಿದ್ದಾನೆ. ಟ್ರಂಕ್‌ನಲ್ಲಿ ತುಂಬಿಟ್ಟಿದ್ದ ಮೃತದೇಹದ ಉಳಿದ ಭಾಗವನ್ನು ಆತನ ಕೊಠಡಿಯಿಂದ ವಶಕ್ಕೆ ಪಡೆಯಲಾಗಿದೆ’ ಎಂದು ಡಿಸಿಪಿ (ಮಲ್ಕಾಜ್‌ಗಿರಿ ವಲಯ) ಪಿ.ವಿ. ಪದ್ಮಜಾ ತಿಳಿಸಿದ್ದಾರೆ.

ಪತ್ನಿಯ ದೇಹವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿಟ್ಟು ನದಿಗೆ ಎಸೆದಿದ್ದಾನೆ. ನಂತರ ಪತ್ನಿಯ ಸಹೋದರಿಗೆ ಕರೆ ಮಾಡಿ, ಪತ್ನಿ ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ಸಂಬಂಧಿಕರು ಕೂಡಲೇ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆರಂಭದಲ್ಲಿ ನಾಪತ್ತೆಯಾಗಿರುವುದಾಗಿ ನಾಟಕ ಮಾಡಿದ್ದ ಆತ, ವಿಚಾರಣೆ ವೇಳೆ ತಾನೇ ಪತ್ನಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಅವರು ತಿಳಿಸಿದ್ದಾರೆ. 

‘ಆರೋಪಿಯ ವಿರುದ್ಧ ಕೊಲೆ ಹಾಗೂ ಸಾಕ್ಷ್ಯ ನಾಶದ ಆರೋಪದ ಮೇಲೆ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿ ವಶಕ್ಕೆ ಪಡೆಯಲಾಗಿದೆ.ಮೃತದೇಹಗಳ ಪತ್ತೆಗಾಗಿ ನದಿಯಲ್ಲಿ ಹುಡುಕಾಡಿದರೂ, ಪತ್ತೆಯಾಗಿಲ್ಲ’ ಎಂದು ಪದ್ಮಜಾ ಹೇಳಿದ್ದಾರೆ.

ಆರೋಪಿ ಹಾಗೂ ಆತನ ಪತ್ನಿ ವಿಕಾರಾಬಾದ್‌ ಜಿಲ್ಲೆಯ ನಿವಾಸಿಗಳಾಗಿದ್ದು, ನೆರೆಹೊರೆಯವರು. ಪ್ರೀತಿಸಿ, ಕುಟುಂಬಸ್ಥರ ಒಪ್ಪಿಗೆಯಂತೆ 2024ರ ಜನವರಿಯಲ್ಲಿ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದರು. ಮದುವೆ ಬಳಿಕ ಹೈದರಾಬಾದ್‌ನ ಬೊಡುಪ್ಪಲ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆರಂಭದ ಒಂದು ತಿಂಗಳ ಚೆನ್ನಾಗಿಯೇ ಇದ್ದ ಅವರು, ನಂತರ ಗಲಾಟೆಗಳು ಆರಂಭವಾಗಿತ್ತು. 2024ರ ಏಪ್ರಿಲ್‌ನಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪತ್ನಿ ದೂರು ನೀಡಿದ್ದರು. ನಂತರ ಕುಟುಂಬದ ಹಿರಿಯರು ಮಾತುಕತೆ ನಡೆಸಿ, ಒಂದುಗೂಡಿಸಿದ್ದರು.

ನಂತರ ಮತ್ತೆ ಒಂದಾಗಿದ್ದರಿಂದ ಮಹಿಳೆಯು ಗರ್ಭಿಣಿಯಾಗಿದ್ದರು. ಬಳಿಕವೂ ಮತ್ತೆ ಇಬ್ಬರ ನಡುವೆ ಗಲಾಟೆ ಆರಂಭವಾಗಿ ಕೊಲೆಯಲ್ಲಿ ಪರ್ಯಾವಸನಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.