ಹೈದರಾಬಾದ್: ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಮತ್ತು ಅರ್ಬೋರ್ ಡೇ ಫೌಂಡೇಷನ್ ಹೈದರಾಬಾದ್ ನಗರಕ್ಕೆ ‘2020ರ ಜಗತ್ತಿನ ಗಿಡಗಳ ನಗರ’ ಎಂದು ಮಾನ್ಯತೆ ನೀಡಿವೆ.
ನಗರ ಅರಣ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಬೆಳೆಸುತ್ತಿರುವುದಕ್ಕೆ ಈ ಮಾನ್ಯತೆ ನೀಡಲಾಗಿದೆ. ದೇಶದಲ್ಲಿಯೇ ಹೈದರಾಬಾದ್ ನಗರಕ್ಕೆ ಮಾತ್ರ ಈ ಗೌರವ ದೊರೆತಿದೆ.
ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳ 51 ನಗರಗಳ ಜತೆ ಹೈದರಾಬಾದ್‌ಗೆ ಈ ಮಾನ್ಯತೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.