ADVERTISEMENT

ಮುಂಬೈ: ₹42 ಕೋಟಿ ಬೆಲೆಯ ಹೈಡ್ರೊಪೋನಿಕ್‌ ಗಾಂಜಾ ವಶ

ಪಿಟಿಐ
Published 3 ನವೆಂಬರ್ 2025, 14:19 IST
Last Updated 3 ನವೆಂಬರ್ 2025, 14:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ₹42 ಕೋಟಿ ಬೆಲೆಯ 42.34 ಕೆ.ಜಿ ಹೈಡ್ರೊಪೋನಿಕ್‌ ಗಾಂಜಾವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಭಾನುವಾರ ವಶಪಡಿಸಿಕೊಂಡಿದ್ದಾರೆ. 

ಬ್ಯಾಂಕಾಕ್‌ನಿಂದ ಬಂದಿಳಿದ ಇಬ್ಬರು ಪ್ರಯಾಣಿಕರ ಬ್ಯಾಗ್‌ಗಳಿಂದ ಮಾದಕವನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದರು.

ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಯಿತು. ಗಾಂಜಾವನ್ನು ನೂಡಲ್ಸ್‌ ಹಾಗೂ ಬಿಸ್ಕತ್ತಿನ 21 ಪೊಟ್ಟಣಗಳಲ್ಲಿ ತುಂಬಿ ಸಾಗಿಸಲಾಗಿತ್ತು. ಇಬ್ಬರನ್ನೂ ಬಂಧಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ 90 ಕೋಟಿ ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT