ADVERTISEMENT

ಲಖನೌ: ₹24 ಕೋಟಿ ಮೌಲ್ಯದ ಹೈಡ್ರೊಪೋನಿಕ್‌ ಗಾಂಜಾ ವಶ

ವಿಮಾನ ನಿಲ್ದಾಣದಲ್ಲಿ ಇಬ್ಬರು ಆರೋಪಿಗಳ ಬಂಧನ

ಪಿಟಿಐ
Published 29 ಆಗಸ್ಟ್ 2025, 14:17 IST
Last Updated 29 ಆಗಸ್ಟ್ 2025, 14:17 IST
.
.   

ಲಖನೌ: ಇಲ್ಲಿನ ಚೌಧರಿ ಚರಣ್‌ ಸಿಂಗ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹24 ಕೋಟಿ ಮೌಲ್ಯದ ಹೈಡ್ರೊಪೋನಿಕ್‌ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಆಗಸ್ಟ್‌ 26ರಂದು ಬ್ಯಾಂಕಾಂಕ್‌ನಿಂದ ಬಂದ ಆರೋಪಿಗಳು ಲಗೇಜ್‌ ಬ್ಯಾಗ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಾಗಿಸುತ್ತಿದ್ದದ್ದು ತಪಾಸಣೆ ವೇಳೆ ಪತ್ತೆಯಾಗಿದೆ. 23.93 ಕೆ.ಜಿ. ಹೈಡ್ರೊಪೋನಿಕ್‌ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬುಧವಾರ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋಷಕಾಂಶ ಸಮೃದ್ಧವಾಗಿರುವ ನೀರಿನಲ್ಲಿ ಹೈಡ್ರೊಪೋನಿಕ್‌ ವಿಧಾನದ ಮೂಲಕ ಗಾಂಜಾ ಬೆಳೆಯಲಾಗಿದ್ದು, ಸಾಂಪ್ರದಾಯಿಕ ಗಾಂಜಾಕ್ಕೆ ಹೋಲಿಸಿದರೆ ಇದು ಹೆಚ್ಚಿನ ಅಮಲು ಬರಿಸುವ ಸಾಮರ್ಥ್ಯ ಹಾಗೂ ಗುಣಮಟ್ಟವನ್ನು ಹೊಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.