ADVERTISEMENT

20 ಕೆ.ಜಿ ಆರ್‌ಡಿಎಕ್ಸ್ ಇದೆ, ಮೋದಿಯನ್ನು ಕೊಲ್ಲುತ್ತೇನೆ: ಎನ್‌ಐಎಗೆ ಇಮೇಲ್

ಐಎಎನ್ಎಸ್
Published 1 ಏಪ್ರಿಲ್ 2022, 11:22 IST
Last Updated 1 ಏಪ್ರಿಲ್ 2022, 11:22 IST
ಪ್ರಧಾನಿ ನರೇಂದ್ರ ಮೋದಿ: ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ: ಪಿಟಿಐ ಚಿತ್ರ   

ಮುಂಬೈ: ‘ನನ್ನ ಬಳಿ 20 ಕೆ.ಜಿ ಆರ್‌ಡಿಎಕ್ಸ್ ಸ್ಫೋಟಕ ಇದೆ, ಪ್ರಧಾನಿ ಮೋದಿಯನ್ನು ಕೊಲ್ಲುತ್ತೇನೆ’ ಎಂದು ಮುಂಬೈನ ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಶಾಖಾ ಕಚೇರಿಗೆ ಬೆದರಿಕೆ ಇಮೇಲ್ ಬಂದಿದೆ.

ಪ್ರಧಾನಿ ಮೋದಿ ಜೊತೆ ಲಕ್ಷಾಂತರ ಜನರ ಜೀವ ತೆಗೆಯಲು ನಾನು ಸಿದ್ಧನಾಗಿದ್ದೇನೆ ಎಂದೂ ಮೇಲ್‌ನಲ್ಲಿ ಬೆದರಿಕೆ ಒಡ್ಡಲಾಗಿದೆ ಎಂದು ತಿಳಿದು ಬಂದಿದೆ.

‘ನಾನು ಕೆಲ ಭಯೋತ್ಪಾದಕರನ್ನು ಭೇಟಿಯಾಗಿದ್ದೆ. ಅವರು ಆರ್‌ಡಿಎಕ್ಸ್ ನೀಡುವ ಮೂಲಕ ನೆರವು ನೀಡುತ್ತಿದ್ದಾರೆ. ನನಗೆ ಸುಲಭವಾಗಿ ಬಾಂಬ್ ಸಿಕ್ಕಿದ್ದಕ್ಕೆ ಅತ್ಯಂತ ಸಂತೋಷವಾಗುತ್ತಿದೆ. ಈಗ ನಾನು ಎಲ್ಲ ಕಡೆ ಸ್ಫೋಟ ನಡೆಸುತ್ತೇನೆ. ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದೇನೆ. 20 ಸ್ಲೀಪರ್ ಸೆಲ್‌ಗಳು ಕ್ರಿಯಾಶೀಲವಾಗಲಿವೆ. ಲಕ್ಷಾಂತರ ಜನರನ್ನು ಕೊಲ್ಲುತ್ತೇವೆ’ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಇಮೇಲ್ ಕಳುಹಿಸಿದವನನ್ನು ಪತ್ತೆ ಮಾಡಲು ಎನ್‌ಐಎ ಮತ್ತು ಇತರ ತನಿಖಾ ಸಂಸ್ಥೆಗಳು ಮುಂದಾಗಿವೆ. ಐಪಿ ಅಡ್ರೆಸ್ ಜಾಡು ಹಿಡಿದು ಮೇಲ್ ಕಳುಹಿಸಿದ ದುಷ್ಕರ್ಮಿಯ ವಿಳಾಸ ಪತ್ತೆ ಮಾಡಲಾಗುತ್ತಿದೆ.

ಬೆದರಿಕೆ ಇಮೇಲ್ ಕುರಿತಂತೆ ಎನ್‌ಐಎ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.