ADVERTISEMENT

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಪುತ್ರಿ, ಅಳಿಯನ ಮನೆ ಮೇಲೆ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 11:07 IST
Last Updated 2 ಏಪ್ರಿಲ್ 2021, 11:07 IST
ಎಂ.ಕೆ. ಸ್ಟಾಲಿನ್: ಪಿಟಿಐ ಚಿತ್ರ
ಎಂ.ಕೆ. ಸ್ಟಾಲಿನ್: ಪಿಟಿಐ ಚಿತ್ರ   

ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರ ಮಗಳು ಸೆಂಥಮರೈ, ಅಳಿಯ ಶಬರೀಶನ್ ಮತ್ತು ಆಪ್ತರ ಚೆನ್ನೈನಲ್ಲಿರುವ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸೀನಿಕ್ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಸ್ಟಾಲಿನ್ ಅವರ ಪುತ್ರಿ ಸೆಂಥಮರೈ ಮತ್ತು ಶಬರೀಶನ್ ಅವರು ವಾಸವಿರುವನೀಲಾಂಗರೈ ನಿವಾಸ ಮತ್ತು ಒಂದೆರಡು ಕಚೇರಿಗಳಲ್ಲಿ ಬೆಳಿಗ್ಗೆಯಿಂದ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಸೆಂಥಮರೈ ಚೆನ್ನೈನಲ್ಲಿ ಸಿಬಿಎಸ್ಇ ಶಾಲೆಯನ್ನು ನಡೆಸುತ್ತಿದ್ದರೆ, ಶಬರೀಶನ್ ಒಬ್ಬ ಉದ್ಯಮಿ. ಜೊತೆಗೆ, ಸ್ಟಾಲಿನ್‌ ಅವರಿಗೆ ರಾಜಕೀಯ ಸಲಹೆಗಾರರಾಗಿದ್ದಾರೆ. ಸ್ಟಾಲಿನ್ ಅವರ ಕೆಲವೇ ಕೆಲವು ನಂಬಿಕಸ್ಥ ವ್ಯಕ್ತಿಗಳಲ್ಲಿ ಶಬರೀಶನ್ ಸಹ ಒಬ್ಬರು.

ADVERTISEMENT

ಇದೇ ಏಪ್ರಿಲ್ 6ರಂದು ತಮಿಳುನಾಡುವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಡಿಎಂಕೆ, ಚುನಾವಣಾ ಕಣದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳಲ್ಲೊಂದಾಗಿದೆ.

ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.