ADVERTISEMENT

ಭಾರತೀಯ ವಾಯು ಪಡೆಯ ಮಿಗ್‌–27 ಪತನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 5:50 IST
Last Updated 4 ಸೆಪ್ಟೆಂಬರ್ 2018, 5:50 IST
ಮಿಗ್‌–27 ವಿಮಾನ ಪತನ 
ಮಿಗ್‌–27 ವಿಮಾನ ಪತನ    

ಜೋಧಪುರ: ಭಾರತೀಯ ವಾಯು ಪಡೆ(ಐಎಎಫ್‌)ಗೆ ಸೇರಿದ ಮಿಗ್‌–27 ವಿಮಾನ ರಾಜಸ್ಥಾನದ ಜೋಧಪುರ ಸಮೀಪ ಮಂಗಳವಾರ ಬೆಳಿಗ್ಗೆ ಪತನವಾಗಿದೆ.

ಡೋಲಿಯಾ ಕಲಾನ್‌ ಗ್ರಾಮದ ಬಳಿ ಮಿಗ್‌ ಪತನಗೊಂಡಿದ್ದು, ಪೈಲಟ್‌ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜೋಧಪುರದ ವಾಯು ಪಡೆ ಘಟಕದಿಂದ ಹಾರಾಟ ನಡೆಸಿದ್ದ ವಿಮಾನ ಮಾರ್ಗ ಮಧ್ಯೆ ಪತನಗೊಂಡಿದೆ. ಈ ಅಪಘಾತದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ವಕ್ತಾರ ಕರ್ನಲ್‌ ಸೋಂಬಿತ್ ಘೋಷ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.