ADVERTISEMENT

ಫ್ರಾನ್ಸ್‌ಗೆ ತೆರಳಿದ ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್.ಬಧೌರಿಯಾ

ಪಿಟಿಐ
Published 19 ಏಪ್ರಿಲ್ 2021, 8:36 IST
Last Updated 19 ಏಪ್ರಿಲ್ 2021, 8:36 IST
ಆರ್‌.ಕೆ.ಎಸ್.ಬಧೌರಿಯಾ
ಆರ್‌.ಕೆ.ಎಸ್.ಬಧೌರಿಯಾ   

ನವದೆಹಲಿ: ‘ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್.ಬಧೌರಿಯಾ ಸೋಮವಾರ ಫ್ರಾನ್ಸ್‌ಗೆ ತೆರಳಿದ್ದು,ಉಭಯ ರಾಷ್ಟ್ರಗಳ ವಾಯುಪಡೆಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದಾರೆ’ ಎಂದು ವಾಯು‍ಪಡೆಯ ಪ್ರಕಟಣೆ ತಿಳಿಸಿದೆ.

ಬಧೌರಿಯಾ ಅವರು ಫ್ರಾನ್ಸ್‌ನ ಹಿರಿಯ ಮಿಲಿಟರಿ ನಾಯಕನೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಫ್ರಾನ್ಸ್‌ನ ವಾಯುನೆಲೆ ಮತ್ತು ಇತರೆ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

‘ಈ ಭೇಟಿಯು ಪರಸ್ಪರ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ತರದ ಹೆಜ್ಜೆಯಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.