ADVERTISEMENT

ದುರ್ಗಮ ವಾಯುನೆಲೆಯಲ್ಲಿ 1000 ಬಾರಿ ಸುಗಮ ಲ್ಯಾಂಡಿಂಗ್‌: ಸಂದೀಪ್ ಅಪರೂಪದ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 12:16 IST
Last Updated 2 ಮೇ 2019, 12:16 IST
   

ನವದೆಹಲಿ: ದೇಶದ ದುರ್ಗಮ ವಾಯುನೆಲೆಗಳೆಂದು ಕರೆಯಲಾಗುವ ಲೇಹ್‌ ಮತ್ತು ಥಾಯಿಸ್‌ಗಳಲ್ಲಿ,ಕ್ಯಾಪ್ಟನ್‌ ಸಂದೀಪ್‌ ಸಿಂಗ್‌ ಛಾಬ್ರಾ 1,000 ಬಾರಿ ಸುಗಮ ಲ್ಯಾಂಡಿಂಗ್‌ ಮಾಡಿ, ಅಪರೂಪದ ಸಾಧನೆ ಮಾಡಿದ್ದಾರೆ.

ರಷ್ಯಾ ನಿರ್ಮಿತ ಐಎಲ್-76 ಯುದ್ಧ ವಿಮಾನಗಳನ್ನು ಸುಗಮವಾಗಿ ಇಳಿಸುವುದಕ್ಕೆ ಭಾರಿ ಕೌಶಲ ಮತ್ತು ನಿಖರತೆಯ ಜ್ಞಾನ, ಪರಿಣತಿ ಬೇಕಾಗುತ್ತದೆ ಎಂದು ವಾಯುಸೇನೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಂದೀಪ್‌ ಅವರು ಬುಧವಾರ ತಮ್ಮ 1000ನೇ ಸುರಕ್ಷಿತ ಲ್ಯಾಂಡಿಂಗ್‌ ಮಾಡಿದ್ದರ ಬಗ್ಗೆ ವಾಯುಸೇನೆ ತನ್ನ ಟ್ವಿಟ್ಟರ್‌ನಲ್ಲಿ ಪ್ರಕಟಿಸಿಕೊಂಡಿದ್ದು, ಅವರಿಗೆ ಅಭಿನಂದನೆಯನ್ನು ಸಲ್ಲಿಸಿದೆ.

ADVERTISEMENT

ಈ ಯುದ್ಧ ಭೂಮಿಗಳು ನೆಲದಿಂದ 10 ಸಾವಿರ ಅಡಿ ಎತ್ತರದಲ್ಲಿವೆ. ಕಡಿದಾದ ಕಣಿವೆಗಳು ಈ ಯುದ್ಧಭೂಮಿಯ ಸುತ್ತ ಇದ್ದು ವಿಶ್ವದಲ್ಲಿಯೇ ದುರ್ಗಮ ಪ್ರದೇಶಗಳಾಗಿವೆ. ಗುಡ್ಡಗಾಡು ಪ್ರದೇಶಗಳಿಗೆ ಭಾರಿ ಗಾತ್ರದ ಯಂತ್ರೋಪಕರಣಗಳನ್ನು ಸಾಗಿಸಲು ಐಎಲ್‌–76 ಅನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಟ್ಯಾಂಕರ್‌ಗಳಿಗೆ ಇಂಧನ ತುಂಬಲೂ ಇವುಗಳನ್ನು ಬಳಸಲಾಗುತ್ತದೆ.

ಸಂದೀಪ್‌ ಅವರು ತಮ್ಮ ಪೈಲಟ್‌ ವೃತ್ತಿಯಲ್ಲಿ 8,500 ಗಂಟೆಗಳ ಕಾಲ ಯುದ್ಧವಿಮಾನಗಳ ಚಾಲನೆ ಮಾಡಿದ್ದಾರೆ. ಅದರಲ್ಲಿ 5,000 ಗಂಟೆಗಳಷ್ಟು ಐಎಲ್‌–76ಅನ್ನೇ ಚಲಾಯಿಸಿದ್ದಾರೆ. ಲೇಹ್‌ ಮತ್ತು ಥಾಯಿಸ್‌ ವಾಯುನೆಲೆಗಳಲ್ಲಿರಾತ್ರಿ ಹೊತ್ತಿನಲ್ಲಿ ವಿಮಾನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ ಕೆಲವರಲ್ಲಿ ಇವರೂ ಒಬ್ಬರು.

ಉತ್ತರಾಖಂಡ್‌ನಡೆಹ್ರಾಡೂನ್‌ನವರಾದ ಗ್ರೂಪ್ ಕ್ಯಾಪ್ಟನ್ ಸಂದೀಪ್‌ ಛಾಬ್ರಾ, ಅಲ್ಲಿನ ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು ಮತ್ತು ಖಡಕ್‌ವಾಸ್ಲದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಶಿಕ್ಷಣ ಪೂರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.