ADVERTISEMENT

ವಿಮಾನದಲ್ಲಿ ಅಭಿನಂದನ್‍ ಕುಟುಂಬಕ್ಕೆ ಎದ್ದು ನಿಂತು ಗೌರವ ಸೂಚಿಸಿದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 6:57 IST
Last Updated 1 ಮಾರ್ಚ್ 2019, 6:57 IST
   

ನವದೆಹಲಿ: ಭಾರತದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬರಮಾಡಿಕೊಳ್ಳಲು ವಿಮಾನದಲ್ಲಿ ಚೆನ್ನೈನಿಂದ ದೆಹಲಿಗೆ ತೆರಳಿದ ಅಭಿನಂದನ್‍ನ ಕುಟುಂಬಕ್ಕೆ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದ್ದಾರೆ.

ಶುಕ್ರವಾರಚೆನ್ನೈನಿಂದ ದೆಹಲಿಗೆ ಪ್ರಯಾಣಿಸಿದ ಅಭಿನಂದನ್ ಅಪ್ಪ ನಿವೃತ್ತ ಏರ್ ಮಾರ್ಷಲ್ ಎಸ್. ವರ್ಧಮಾನ್ ಮತ್ತುಪತ್ನಿ ಶೋಭಾ ಅವರಿಗೆ ವಿಮಾನದಲ್ಲಿ ಈ ರೀತಿಯ ಗೌರವ ದಕ್ಕಿದೆ.ಪ್ರಯಾಣಿಕರು ಅಭಿನಂದನ್ ಕುಟುಂಬಕ್ಕೆ ಗೌರವ ಸೂಚಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಅಭಿನಂದನ್‌ ಅವರನ್ನು ಶುಕ್ರವಾರ ವಾಪಸ್‌ ಕಳುಹಿಸಲು ಪಾಕಿಸ್ತಾನ ಒಪ್ಪಿಕೊಂಡಿದ್ದು,ವಾಯುಪಡೆಯ ನಿಯೋಗವು ವಾಘಾ ಗಡಿಯಲ್ಲಿ ಅವರನ್ನು ಸ್ವಾಗತಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶುಕ್ರವಾರ ಸಂಜೆಗೆ ವಾಘಾ ಗಡಿ ತಲುಪಲಿರುವಕಮಾಂಡರ್‌ನ್ನುವಾಯುಪಡೆಯ ನಿಯೋಗವು ಬರಮಾಡಿಕೊಳ್ಳಲಿದೆ. ಆದರೆ ಪಾಕ್‌ ಸೇನೆ ಅಭಿನಂದನ್‌ರನ್ನು ಅಂತರರಾಷ್ಟ್ರೀಯ ರೆಡ್‌ಕ್ರಾಸ್‌ ಸಮಿತಿ ಸದಸ್ಯರಿಗೆ ಒಪ್ಪಿಸಲಿದೆಯೇ ಅಥವಾ ಭಾರತದ ಅಧಿಕಾರಿಗಳಿಗೆ ಒಪ್ಪಿಸಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.