ADVERTISEMENT

ಇತಿಹಾಸದ ಪುಟ ಸೇರಿದ ‘ಕಾರ್ಗಿಲ್ ಹೀರೊ’ ಮಿಗ್–27

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 3:12 IST
Last Updated 27 ಡಿಸೆಂಬರ್ 2019, 3:12 IST
   

ನವದೆಹಲಿ:ಕಾರ್ಗಿಲ್ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದಮಿಗ್–27 ಯುದ್ಧ ವಿಮಾನಗಳ ಸೇವೆ ಇಂದಿನಿಂದ ಅಧಿಕೃತವಾಗಿ ಕೊನೆಯಾಗಲಿದೆ. ಭಾರತೀಯ ವಾಯುಪಡೆಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿರುವ ಹೆಗ್ಗಳಿಕೆ ಈ ಯುದ್ಧವಿಮಾನಕ್ಕಿದೆ.

ಜೋಧಪುರದ ವಾಯುನೆಲೆಯಲ್ಲಿ ಈ ವಿಮಾನಗಳಿಗೆ ನೆಲೆ ಕಲ್ಪಿಸಲಾಗಿದೆ. ಇಂದು ಕೊನೆಯಬಾರಿಗೆಮಿಗ್–27 ಯುದ್ಧವಿಮಾನಗಳು ಹಾರಾಟ ನಡೆಸಲಿವೆ. 80ರ ದಶಕದಲ್ಲಿ ವಾಯುಪಡೆಗೆ ಸೇರ್ಪಡೆಗೊಂಡ ಇವು, ಕಾರ್ಗಿಲ್ ಯುದ್ಧದ ವೇಳೆ ನಡೆಸಿದ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ‘ಬಹದ್ದೂರ್‌’ ಎಂಬ ಅಡ್ಡಹೆಸರಿನಿಂದ ಪ್ರಸಿದ್ಧಿಪಡೆದಿದ್ದವು.

ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನದ ವಶಕ್ಕೆ ಸಿಲುಕಿ ಬಳಿಕ ಬಿಡುಗಡೆಯಾಗಿ ಬಂದಿದ್ದ ಫ್ಲೈಟ್ ಲೆಫ್ಟಿನೆಂಟ್ಕಂಭಂಪಾಟಿ ನಚಿಕೇತ್ ಸಹಮಿಗ್–27 ಯುದ್ಧವಿಮಾನ ಮುನ್ನಡೆಸಿದ್ದರು. ಮಿಗ್–27 ಪತನಗೊಂಡಿದ್ದರಿಂದಲೇ ಅವರು ಪಾಕ್ ವಶವಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.