ADVERTISEMENT

100ನೇ ವಸಂತಕ್ಕೆ ಕಾಲಿಟ್ಟ ಡಿ.ಎಸ್‌.ಮಜಿತಿಯಾ; ಐಎಎಫ್‌ನಿಂದ ಗೌರವ ಸಲ್ಲಿಕೆ

ಏಜೆನ್ಸೀಸ್
Published 31 ಜುಲೈ 2020, 11:14 IST
Last Updated 31 ಜುಲೈ 2020, 11:14 IST
ಭಾರತೀಯ ವಾಯುಪಡೆ ಅಧಿಕಾರಿಗಳು ನಿವೃತ ಸ್ಕ್ವಾಡ್ರನ್‌ ನಾಯಕ ದಲಿಪ್‌ ಸಿಂಗ್‌ ಮಜಿತಿಯಾ ಅವರಿಗೆ ಶುಭ ಕೋರಿದರು.
ಭಾರತೀಯ ವಾಯುಪಡೆ ಅಧಿಕಾರಿಗಳು ನಿವೃತ ಸ್ಕ್ವಾಡ್ರನ್‌ ನಾಯಕ ದಲಿಪ್‌ ಸಿಂಗ್‌ ಮಜಿತಿಯಾ ಅವರಿಗೆ ಶುಭ ಕೋರಿದರು.    

ನವದೆಹಲಿ: ನಿವೃತ ಸ್ಕ್ವಾಡ್ರನ್‌ ನಾಯಕ ದಲಿಪ್‌ ಸಿಂಗ್‌ ಮಜಿತಿಯಾ ಅವರು 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂಭ್ರಮದಲ್ಲಿ ಭಾರತೀಯ ವಾಯುಪಡೆ ಶುಭ ಹಾರೈಸಿದೆ.

ಎರಡನೇ ಮಹಾಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದ, 1947ರ ಆಗಸ್ಟ್‌ನಲ್ಲಿ ನಿವೃತರಾದ ಡಿ.ಎಸ್‌.ಮಜಿತಿಯಾ,ಅತ್ಯಂತ ಹಳೆಯಐಎಎಫ್‌ ಫೈಟರ್‌ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಮುಖ್ಯಸ್ಥ ಮಾರ್ಷಲ್‌ ಆರ್‌ಕೆಎಸ್‌ ಭದೌರಿಯಾ ಅವರು ಯೋಧರ ಪರವಾಗಿ ಶುಭಾಶಯ ತಿಳಿಸಿದ್ದಾರೆ.

ADVERTISEMENT

ಮಜಿತಿಯಾ ಅವರು ಪತ್ನಿ ಮತ್ತು ವಾಯುಪಡೆ ಅಧಿಕಾರಿಗಳ ಸಮ್ಮುಖದಲ್ಲಿ ಕೇಕ್‌ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಂಭ್ರಮದ ವಿಡಿಯೊ ಮತ್ತು ಹಳೆ ಭಾವಚಿತ್ರಗಳನ್ನು ಐಎಎಫ್‌ ತನ್ನ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.