
ಮುಂಬೈ: ‘ಭಾರತವು ಮುಂದಿಟ್ಟಿರುವ ಪ್ರಸ್ತಾವಗಳನ್ನ ಒಪ್ಪಿದ್ದರೆ ಅಮೆರಿಕವು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬೇಕು’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಎರಡು ರಾಷ್ಟ್ರಗಳ ನಡುವೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಒಪ್ಪಂದದ ಕುರಿತಂತೆ ಭಾರತವು ಮುಂದಿಟ್ಟಿರುವ ಪ್ರಸ್ತಾವಗಳ ಕುರಿತು ಟ್ರಂಪ್ ಆಡಳಿತದ ನಿಲುವನ್ನು ಗೋಯಲ್ ಸ್ವಾಗತಿಸಿದರು. ಆದರೆ, ಒಪ್ಪಂದಕ್ಕೆ ಸಹಿ ಹಾಕುವ ಕುರಿತು ಯಾವುದೇ ಗಡುವು ನೀಡಲಿಲ್ಲ.
‘ಭಾರತದಿಂದ ಇದುವರೆಗಿನ ಅತ್ಯುತ್ತಮವಾದ ಪ್ರಸ್ತಾವವನ್ನು ಅಮೆರಿಕ ಪಡೆದುಕೊಂಡಿದೆ’ ಎಂದು ಅಮೆರಿಕ ವ್ಯಾಪಾರ ವ್ಯವಹಾರಗಳ ಪ್ರತಿನಿಧಿ ಜಮೈಸನ್ ಗ್ರೀನರ್ ಹೇಳಿಕೆ ನೀಡಿದ್ದರು.
‘ಅವರ ಸಂತಸವನ್ನು ನಾವು ಸ್ವಾಗತಿಸುತ್ತೇವೆ, ಅವರು ಸಂತುಷ್ಟರಾಗಿದ್ದರೆ ಒಪ್ಪಂದಕ್ಕೆ ಸಹಿ ಹಾಕಬೇಕು’ ಎಂದು ಗೋಯಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.