ADVERTISEMENT

12 ವರ್ಷದ ನಂತರ ದೆಹಲಿ ಐಐಟಿ ಪಠ್ಯಕ್ರಮ ಪರಿಷ್ಕರಣೆ

ಪಿಟಿಐ
Published 27 ಮೇ 2025, 13:42 IST
Last Updated 27 ಮೇ 2025, 13:42 IST
<div class="paragraphs"><p>ಐಐಟಿ ದೆಹಲಿ</p></div>

ಐಐಟಿ ದೆಹಲಿ

   

ಪಿಟಿಐ

ನವದೆಹಲಿ: ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ(ಐಐಟಿ) 12 ವರ್ಷಗಳ ನಂತರ ತನ್ನ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ವಿದ್ಯಾರ್ಥಿಗಳ ಮೇಲಿನ ಹೊರೆ ತಗ್ಗಿಸುವುದು ಮತ್ತು ಉದ್ಯಮ ವಲಯದ ಬದಲಾವಣೆಗಳಿಗೆ ಪೂರಕವಾಗಿ ಪರಿಷ್ಕರಣೆ ನಡೆದಿದೆ ಎಂದು ಸಂಸ್ಥೆಯ ನಿರ್ದೇಶಕ ರಂಗನ್ ಬ್ಯಾನರ್ಜಿ ತಿಳಿಸಿದ್ದಾರೆ.

ADVERTISEMENT

ಮಂಗಳವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ , ‘ಹೊಸ ಅನ್ವೇಷಣೆಯಾದ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್‌–ಎಐ) ಮತ್ತು ಸುಸ್ಥಿರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಠ್ಯಕ್ರಮದ ಬದಲಾವಣೆ ಆಗಿದೆ’ ಎಂದು ಅವರು ತಿಳಿಸಿದರು.

2013ರಲ್ಲಿ ಪಠ್ಯಕ್ರಮದ ಪರಿಷ್ಕರಣೆ ನಡೆದಿತ್ತು. ಉದ್ಯಮ ಮತ್ತು ಸಮಾಜ ವಿಜ್ಞಾನ ಪರಿಣತರ ಅಭಿಪ್ರಾಯ ಆಧರಿಸಿ ಹೊಸ ಪಠ್ಯ ರೂಪಿಸಲಾಗಿದೆ. 15 ಸದಸ್ಯರ ಸಮಿತಿಯು ಸ್ಟ್ಯಾನ್‌ಫೋರ್ಡ್‌, ಕ್ಯಾಲಿಫೋರ್ನಿಯಾ ಸೇರಿ ಎಂಟು ಪ್ರತಿಷ್ಠಿತ ಸಂಸ್ಥೆಗಳ ಪಠ್ಯ ಅವಲೋಕಿಸಿ ಪರಿಷ್ಕರಣೆ ಮಾಡಿದೆ ಎಂದರು.

ತರಗತಿಗಳ ಸಂಖ್ಯೆಯನ್ನು 300ರಿಂದ 150ಕ್ಕೆ ತಗ್ಗಿಸಲಾಗಿದೆ. ಕಲಿಕೆಯ ಮೇಲೆ ವೈಯಕ್ತಿಕ ನಿಗಾ ಇಡುವುದು ಇದರಿಂದ ಸಾಧ್ಯವಾಗಲಿದೆ. 

ಬಿ.ಟೆಕ್ ಪದವಿ ಜತೆಗೆ ಆನರ್ಸ್ ಪ್ರೋಗ್ರಾಂ ಅಳವಡಿಸಿದ್ದು, ದೆಹಲಿ ಐಐಟಿಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳು ಮೂರನೇ ವರ್ಷದ ಅಂತ್ಯದಲ್ಲಿ ಯಾವುದೇ ಎಂ.ಟೆಕ್‌ ಪದವಿಗೆ ಅರ್ಜಿ ಸಲ್ಲಿಸಬಹುದು. ಐದು ವರ್ಷಗಳಲ್ಲಿ ವಿದ್ಯಾರ್ಥಿಯು ಪದವಿ ಮತ್ತು ಸ್ನಾತಕೋತ್ತರ ಎರಡೂ ಪಡೆಯಲು ಇದು ಅನುವು ಮಾಡಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.