ADVERTISEMENT

ಐಐಟಿ ರೂರ್ಕಿ ವಿದ್ಯಾರ್ಥಿಗೆ ರಾಷ್ಟ್ರಪತಿ ಗೌರವ

ಪಿಟಿಐ
Published 4 ಅಕ್ಟೋಬರ್ 2019, 17:59 IST
Last Updated 4 ಅಕ್ಟೋಬರ್ 2019, 17:59 IST
ಅನಂತ್‌ ವಶಿಷ್ಠ
ಅನಂತ್‌ ವಶಿಷ್ಠ   

ರೂರ್ಕಿ: ಸಮೀಪದ ಕಲಿಯಾರ್‌ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ವಿದ್ಯಾರ್ಥಿ ಅನಂತ್‌ ವಸಿಷ್ಠ (22) ಅವರಿಗೆಯುವ ನಾಯಕತ್ವಕ್ಕಾಗಿ ನೀಡುವ ಡಾ.ಜೈ ಕೃಷ್ಣ ಚಿನ್ನದ ಪದಕವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶುಕ್ರವಾರ ಪ್ರದಾನ ಮಾಡಿದರು.

ಅನಂತ್‌ ಅವರು ಬಿ.ಟೆಕ್‌ (ಪ್ರೊಡಕ್ಷನ್‌ ಆ್ಯಂಡ್‌ ಇಂಡಸ್ಟ್ರಿಯಲ್ ಎಂಜಿನಿಯರಿಂಗ್‌) ಪದವಿ ಪಡೆದಿದ್ದು, ಪ್ರಸ್ತುತ ಗುರುಗ್ರಾಮದಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾಡಿದ ಸೇವೆಗೆಸಂಸ್ಥೆಯ 19ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ಅವರು ಪದಕ ನೀಡಿದ್ದಾರೆ.

ಅನಂತ್, ಬಡ ವಿದ್ಯಾರ್ಥಿಗಳಿಗೆ 2015ರಿಂದ ತರಗತಿಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದರು.2019ರಲ್ಲಿ ತಮ್ಮ ಪದವಿ ಶಿಕ್ಷಣ ಪೂರೈಸುವವರೆಗೂ 8 ಕಿ.ಮೀ ದೂರದ ಗ್ರಾಮಕ್ಕೆ ತೆರಳಿ 15ರಿಂದ 20 ಮಕ್ಕಳಿಗೆ ಗಣಿತ ಬೋಧಿಸುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.