ADVERTISEMENT

ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ಅವಕಾಶ: ಚಳವಳಿಗೆ ಐಎಂಎ ನಿರ್ಧಾರ

ಪಿಟಿಐ
Published 14 ಫೆಬ್ರುವರಿ 2021, 12:43 IST
Last Updated 14 ಫೆಬ್ರುವರಿ 2021, 12:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆಯುರ್ವೇದ ವೈದ್ಯರೂ ಸಾಮಾನ್ಯ ಶಸ್ತ್ರಚಿಕಿತ್ಸಾ ಪ್ರಕ್ರಿಯೆ ನಡೆಸಲುಭಾರತೀಯ ಕೇಂದ್ರ ವೈದ್ಯಕೀಯ ಮಂಡಳಿ ಅವಕಾಶ ಕಲ್ಪಿಸಿರುವುದನ್ನು ವಿರೋಧಿಸಿ ಫೆ.15 ರಿಂದ ಮಾರ್ಚ್ 31ರವರೆಗೂ ಸಾಮೂಹಿಕ ಮನವಿ ಸಲ್ಲಿಕೆ ಅಭಿಯಾನ ನಡೆಸಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಪ್ರಕಟಿಸಿದೆ.

ಉದ್ದೇಶಿತ ಅಧಿಸೂಚನೆಯು ಸಾಕಷ್ಟು ಗೊಂದಲ ಮೂಡಿಸಲಿದೆ. ತಕ್ಷಣವೇ ಹಿಂಪಡೆಯಬೇಕು ಎಂದೂ ಆಗ್ರಹಪಡಿಸಿದೆ. ಈ ಬಗ್ಗೆ ಗಮನಸೆಳೆಯಲು ಫೆ. 1ರಿಂದ 14ರವರೆಗೂ ದೇಶದಾದ್ಯಂತ ಧರಣಿ ಪ್ರತಿಭಟನೆಯನ್ನು ನಡೆಸಲಾಗಿದೆ.

‘ಇದು, ಪ್ರಾಯೋಗಿಕವಲ್ಲದ, ಅವೈಜ್ಞಾನಿಕ ಮತ್ತು ಅನೈತಿಕವಾದ ಅಧಿಸೂಚನೆ’ ಎಂದು ಐಎಂಎ ಹೇಳಿಕೆಯಲ್ಲಿ ಟೀಕಿಸಿದೆ. ಸಾಮೂಹಿಕ ಮನವಿ ಚಳವಳಿ ಜೊತೆಗೆ, ನಕಾರಾತ್ಮಕ ಪರಿಣಾಮ ಕುರಿತು ಜನಜಾಗೃತಿ ಮೂಡಿಸಲಾಗುವುದು ಎಂದಿದೆ.

ADVERTISEMENT

ಅಲ್ಲದೆ, ವೈದ್ಯರ ಕೊರತೆ ಇದೆ ಎಂದು ತಪ್ಪು ಅಭಿಪ್ರಾಯವನ್ನು ಮೂಡಿಸಲಾಗಿದೆ. ಇದರ ವಿರುದ್ಧವಾಗಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿರುವ ಸುಮಾರು 1000 ವೈದ್ಯರ ಪಟ್ಟಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದೆ.

ಐಎಂಎ ಸದಸ್ಯರು, ಎಲ್ಲ ವೈದ್ಯರ ಸಂಘಟನೆಗಳು, ವೈದ್ಯಕೀಯ ವಿದ್ಯಾರ್ಥಿಗಳು, ಮಹಿಳಾ ವೈದ್ಯರು ಈ ಅಧಿಸೂಚನೆಯ ವಿರುದ್ಧ ಜನಜಾಗೃತಿ ಮೂಡಿಸುವರು. ಆಧುನಿಕ ವೈದ್ಯಪದ್ಧತಿಯ ಆಸ್ಪತ್ರೆಗಳು ವೈಜ್ಞಾನಿಕ ಮತ್ತು ನೈತಿಕ ಕ್ರಮದ ಶಸ್ತ್ರಚಿಕಿತ್ಸೆ ಪರಿಣತಿಯಮಹತ್ವ ಕುರಿತು ಅರಿವು ಮೂಡಿಸುವರು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.