ಬೆಂಗಳೂರು: ಎಕ್ಸ್‌ಚೇಂಜ್ ಫಾರ್ ಮೀಡಿಯಾ (ಇಫೋರ್‌ಎಂ) ಸಂಸ್ಥೆಯು ನೀಡುವ ಇಂಡಿಯನ್ ಮಾರ್ಕೆಂಟಿಗ್ ಅವಾರ್ಡ್ಸ್– 2024 (ಐಎಂಎ–ಸೌಥ್)ನ ಎರಡು ವಿಭಾಗಗಳಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪ್ರಶಸ್ತಿಗೆ ಭಾಜನವಾಗಿವೆ. ನಗರದ ಎಂ.ಜಿ.ರಸ್ತೆಯ ತಾಜ್ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬ್ರಾಂಡ್ ಎಕ್ಸ್‌ಟೆನ್‌ಷನ್ ಮೀಡಿಯಾ ವಿಭಾಗದಲ್ಲಿ ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ನ ‘ಭೂಮಿಕಾ ಕ್ಲಬ್’ಗೆ ಬೆಳ್ಳಿ ವಿಭಾಗದಲ್ಲಿ ಪ್ರಶಸ್ತಿ ಸಂದರೆ, ‘ಡೆಕ್ಕನ್ ಹೆರಾಲ್ಡ್’ನ ‘ಡಿಎಚ್–ಬೆಂಗಳೂರು–2040 ಸಮ್ಮಿಟ್’ಗೆ ಬಂಗಾರ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿಗಳಿಗಾಗಿ 400ಕ್ಕೂ ಹೆಚ್ಚು ನಾಮನಿರ್ದೇಶನಗಳಿದ್ದವು.
ಮಾರ್ಕೆಟಿಂಗ್ ವಿಭಾಗದಲ್ಲಿ ವಿನೂತನ, ವಿಭಿನ್ನ ರೀತಿಯಲ್ಲಿ ಕೆಲಸ ಮಾಡಿದವರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.