ಪ್ರಾತಿನಿಧಿಕ ಚಿತ್ರ
ಪಣಜಿ: ಗೋವಾದಲ್ಲಿ ಬುಧವಾರ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹಲವಾಮಾನ ಇಲಾಖೆ (ಐಎಂಡಿ) ಮಂಗಳವಾರ ಎಚ್ಚರಿಸಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ.
ಸೋಮವಾರ ರಾತ್ರಿಯಿಂದ ಗೋವಾದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಉತ್ತರ ಮತ್ತು ದಕ್ಷಿಣ ಗೋವಾದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಿತ್ತು. ಮಂಗಳವಾರವೂ ಮಳೆ ಮುಂದುವರಿದಿದೆ.
ಉತ್ತರ ಹಾಗೂ ದಕ್ಷಿಣ ಗೋವಾದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಗಂಟೆಗೆ 50ರಿಂದ 60 ಕಿ.ಮೀ.ವೇಗದಲ್ಲಿ ಬೀಸುವ ಗಾಳಿಯು, 70 ಕಿ.ಮೀ. ವೇಗ ತಲುಪುವ ಸಾಧ್ಯತೆಗಳಿವೆ ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.