ಇಸ್ಲಾಮಾಬಾದ್/ ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಪಾಕಿಸ್ತಾನಕ್ಕೆ 100 ಕೋಟಿ ಡಾಲರ್ (ಅಂದಾಜು ₹8,540 ಕೋಟಿ) ಸಾಲ ತಕ್ಷಣ ಬಿಡುಗಡೆ ಮಾಡಲು ಒಪ್ಪಿದೆ ಎಂದು ಪಾಕ್ ಪ್ರಧಾನ ಮಂತ್ರಿ ಕಚೇರಿ ಶುಕ್ರವಾರ ತಿಳಿಸಿದೆ.
‘ಪಾಕಿಸ್ತಾನಕ್ಕೆ ಐಎಂಎಫ್ 100 ಕೋಟಿ ಡಾಲರ್ ಸಾಲ ವಿತರಿಸಲು ಅನುಮೋದನೆ ನೀಡಿರುವುದು ಮತ್ತು ಅದನ್ನು ತಪ್ಪಿಸಲು ಭಾರತವು ಮಾಡಿದ್ದ ತಂತ್ರಗಳು ವಿಫಲವಾಗಿರುವುದಕ್ಕೆ ಪ್ರಧಾನಿ ಶೆಹಬಾಜ್ ಷರೀಫ್ ಸಂತಸ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿರೋಧಿಸಿದ್ದ ಭಾರತ: ಐಎಂಎಫ್ ಹಣಕಾಸಿನ ನೆರವು ನೀಡಿದರೆ ಪಾಕಿಸ್ತಾನವು ಅದನ್ನು ಗಡಿಯಾಚೆಗಿನ ಭಯೋತ್ಪಾದನೆಗೆ ದುರುಪಯೋಗಪಡಿಸಿಕೊಳ್ಳಬಹುದು ಎಂದು ಭಾರತ ಆತಂಕ ವ್ಯಕ್ತಪಡಿಸಿತ್ತು. ಸಾಲ ನೀಡುವ ಪ್ರಸ್ತಾವವನ್ನು ಶುಕ್ರವಾರ ನಡೆದ ಐಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ವಿರೋಧಿಸಿದ್ದ ಭಾರತ, ಮತದಾನದಿಂದ ದೂರ ಉಳಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.