ADVERTISEMENT

ಕಳೆದ 12 ಗಂಟೆಗಳಲ್ಲಿ ದೇಶದಾದ್ಯಂತ 302 ಕೊರೊನಾ ಪ್ರಕರಣ ದೃಢ: ಆರೋಗ್ಯ ಇಲಾಖೆ

ಏಜೆನ್ಸೀಸ್
Published 5 ಏಪ್ರಿಲ್ 2020, 5:27 IST
Last Updated 5 ಏಪ್ರಿಲ್ 2020, 5:27 IST
   

ನವದೆಹಲಿ: ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 12 ಗಂಟೆ ಅವಧಿಯಲ್ಲಿ 302 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಒಟ್ಟು ಸೋಂಕಿತರ ಸಂಖ್ಯೆ 3,374 ತಲುಪಿದ್ದು, 77 ಮಂದಿ ಮೃತಪಟ್ಟಿದ್ದಾರೆ. 267 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ತಿಳಿಸಿದೆ.

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ತಲಾ ಒಂದೊಂದು ಹೊಸ ಪ್ರಕರಣಗಳು ದೃಢಪಟ್ಟಿವೆ.

ADVERTISEMENT

ಮಹಾರಾಷ್ಟ್ರದಲ್ಲಿ ಅತಿಹೆಚ್ಚು, ಅಂದರೆ 24 ಸಾವು ಸಂಭವಿಸಿದೆ. ಗುಜರಾತ್‌ನಲ್ಲಿ 10, ತೆಲಂಗಾಣದಲ್ಲಿ 7, ಮಧ್ಯಪ್ರದೇಶ, ದೆಹಲಿಯಲ್ಲಿ ತಲಾ 6 ಮತ್ತು ಪಂಜಾಬ್‌ನಲ್ಲಿ 5 ಸಾವು ವರದಿಯಾಗಿದೆ.

ಕರ್ನಾಟಕದಲ್ಲಿ 4, ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ತಲಾ 3 ಮಂದಿ ಮೃತಪಟ್ಟಿದ್ದಾರೆ. ಜಮ್ಮು–ಕಾಶ್ಮೀರ, ಉತ್ತರ ಪ್ರದೇಶ ಮತ್ತು ಕೇರಳದಲ್ಲಿ ತಲಾ 2 ಮಂದಿ ಮೃತಪಟ್ಟಿದ್ದಾರೆ.

ಆಂಧ್ರ ಪ್ರದೇಶ, ಬಿಹಾರ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಅತಿ ಹೆಚ್ಚು ಕೊರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ (490) ದೃಢಪಟ್ಟಿವೆ. ಉಳಿದಂತೆ ತಮಿಳುನಾಡಿನಲ್ಲಿ 485, ದೆಹಲಿಯಲ್ಲಿ 445 ಪ್ರಕರಣಗಳು ದೃಢಪಟ್ಟಿವೆ. ಕೇರಳದಲ್ಲಿ ಈವರೆಗೆ 306 ಪ್ರಕರಣಗಳು ದೃಢಪಟ್ಟಿದ್ದರೆ ತೆಲಂಗಾಣದಲ್ಲಿ 269 ಮತ್ತು ಉತ್ತರ ಪ್ರದೇಶದಲ್ಲಿ 227 ಪ್ರಕರಣಗಳು ದೃಢಪಟ್ಟಿವೆ.

ರಾಜಸ್ಥಾನದಲ್ಲಿ 200, ಆಂಧ್ರ ಪ್ರದೇಶದಲ್ಲಿ 161, ಪ್ರಕರಣ ದಾಖಲಾಗಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ಗುಜರಾತ್‌ನಲ್ಲಿ ಸೋಂಕಿತರ ಸಂಖ್ಯೆ 105ಕ್ಕೆ, ಮಧ್ಯ ಪ್ರದೇಶದಲ್ಲಿ 104ಕ್ಕೆ ಏರಿಕೆಯಾಗಿದೆ.

ಜಮ್ಮು–ಕಾಶ್ಮೀರದಲ್ಲಿ ಈವರೆಗೆ 92 ಮತ್ತು ಪಶ್ಚಿಮ ಬಂಗಾಳದಲ್ಲಿ 69 ಪ್ರಕರಣಗಳು ದೃಢಪಟ್ಟಿವೆ. ಪಂಜಾಬ್‌ನಲ್ಲಿ 57, ಹರಿಯಾಣದಲ್ಲಿ 49, ಬಿಹಾರದಲ್ಲಿ 30, ಅಸ್ಸಾಂನಲ್ಲಿ 24, ಉತ್ತರಾಖಂಡದಲ್ಲಿ 22, ಒಡಿಶಾದಲ್ಲಿ 20, ಚಂಡೀಗಡದಲ್ಲಿ 18 ಮತ್ತು ಲಡಾಕ್‌ನಲ್ಲಿ 14 ಪ್ರಕರಣಗಳು ದೃಢಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.