ಮುಂಬೈ: ಭೀಡ್ ಜಿಲ್ಲೆಯ ಗ್ರಾಮವೊಂದರ ಸರಪಂಚ ಸಂತೋಷ್ ದೇಶಮುಖ್ ಅವರ ಹತ್ಯೆ ಪ್ರಕರಣದಲ್ಲಿ ವಾಲ್ಮಿಕ್ ಕರಾಡ್ ಅವರ ಹೆಸರು ಕೇಳಿಬಂದ ನಂತರದಲ್ಲಿ ಎನ್‌ಸಿಪಿಯ ಧನಂಜಯ ಮುಂಡೆ ಅವರನ್ನು ಮಹಾರಾಷ್ಟ್ರ ಸಂಪುಟದಿಂದ ಕೈಬಿಡಬೇಕು ಎಂಬ ಆಗ್ರಹ ಬಲಗೊಳ್ಳುತ್ತಿದೆ.
ಈ ಪ್ರಕರಣವನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ದೊಡ್ಡ ರಾಜಕೀಯ ಸವಾಲೊಂದನ್ನು ಎದುರಿಸುತ್ತಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಯ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಸಚಿವ ಧನಂಜಯ ಮುಂಡೆ ಅವರು ಕರಾಡ್ ಜೊತೆ ನಂಟು ಹೊಂದಿದ್ದಾರೆ. ಹತ್ಯೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಕರಾಡ್ ಅವರ ಹೆಸರು ಕೇಳಿಬಂದಿದೆ.
ಧನಂಜಯ ಮುಂಡೆ ಅವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಫಡಣವೀಸ್ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.