ADVERTISEMENT

ಪ್ರಧಾನಿ ಮೋದಿಯವರ 5 ಸತ್ಯಗಳನ್ನು ಬಹಿರಂಗಪಡಿಸಿದ ರಾಹುಲ್‌ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2022, 11:34 IST
Last Updated 11 ಜುಲೈ 2022, 11:34 IST
ಕಾರ್ಯಕ್ರಮವೊಂದರಲ್ಲಿ ತಮ್ಮ ಮುಂದೆ ನಡೆದು ಹೋದ ಪ್ರಧಾನಿ ನರೇಂದ್ರ ಮೋದಿ ಅವರತ್ತ ರಾಹುಲ್‌ ದೃಷ್ಟಿ– (ಸಂಗ್ರಹ ಚಿತ್ರ – ಪಿಟಿಐ)
ಕಾರ್ಯಕ್ರಮವೊಂದರಲ್ಲಿ ತಮ್ಮ ಮುಂದೆ ನಡೆದು ಹೋದ ಪ್ರಧಾನಿ ನರೇಂದ್ರ ಮೋದಿ ಅವರತ್ತ ರಾಹುಲ್‌ ದೃಷ್ಟಿ– (ಸಂಗ್ರಹ ಚಿತ್ರ – ಪಿಟಿಐ)   

ನವದೆಹಲಿ: ಚೀನಾದ ಅತಿಕ್ರಮಣ ಮತ್ತು ಅದರ ಬಗೆಗಿನ ಪ್ರಧಾನಿಯವರ ಮೌನವು ದೇಶಕ್ಕೆ ಅತ್ಯಂತ ಹಾನಿಕಾರಕ ಎಂದು ಹೇಳಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಮೋದಿ ಅವರ ಐದು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ.

ಮೋದಿ ಅವರು ಚೀನಾಕ್ಕೆ ಹೆದರಿದ್ದಾರೆ ಮತ್ತು ತಮ್ಮ ಇಮೇಜ್ ರಕ್ಷಿಸಿಕೊಳ್ಳುವುದಕ್ಕಾಗಿ ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಅವರು ಆರೋಪಿಸಿದರು.

‘ಪ್ರಧಾನಿ ಕುರಿತ ಐದು ಸತ್ಯಗಳು: 1. ಚೀನಾಕ್ಕೆ ಹೆದರುತ್ತಾರೆ. 2. ಸಾರ್ವಜನಿಕರಿಂದ ಸತ್ಯವನ್ನು ಮರೆಮಾಚುತ್ತಾರೆ. 3. ಕೇವಲ ತಮ್ಮ ಇಮೇಜ್ ರಕ್ಷಿಸಿಕೊಳ್ಳುತ್ತಾರೆ. 4. ಸೇನೆಯ ನೈತಿಕತೆಯನ್ನು ಕುಗ್ಗಿಸುತ್ತಿದ್ದಾರೆ. 5. ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಚೀನಾದಿಂದ ಹೆಚ್ಚುತ್ತಿರುವ ಒಳನುಸುಳುವಿಕೆ ಮತ್ತು ಪ್ರಧಾನಿಯವರ ಮೌನವು ದೇಶಕ್ಕೆ ತುಂಬಾ ಹಾನಿಕಾರಕ’ ಎಂದು ರಾಹುಲ್‌ ತಮ್ಮ ಅವರು ಹೇಳಿದ್ದಾರೆ.

ಚೀನಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ಮುಂದುವರಿಸಿದೆ ಮತ್ತು ಅದನ್ನು ಮರಳಿ ಪಡೆಯಲು ಸರ್ಕಾರ ಏನೂ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.