ADVERTISEMENT

ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಉದ್ಯೋಗಿಗೆ ವೇತನ ಬಡ್ತಿ: ಸಿಕ್ಕಿಂ ಸರ್ಕಾರ ಯೋಜನೆ

ಪಿಟಿಐ
Published 12 ಮೇ 2023, 15:40 IST
Last Updated 12 ಮೇ 2023, 15:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗ್ಯಾಂಗ್ಟಕ್‌: ಎರಡು ಅಥವಾ ಮೂರು ಮಕ್ಕಳಿರುವ ಸರ್ಕಾರಿ ಉದ್ಯೋಗಿಗೆ ಮುಂಗಡ ಮತ್ತು ಹೆಚ್ಚುವರಿ ವೇತನ ಬಡ್ತಿ ನೀಡಲು ಸಿಕ್ಕಿಂ ಸರ್ಕಾರ ನಿರ್ಧರಿಸಿದೆ. ಇಲ್ಲಿನ ಸ್ಥಳೀಯ ಬುಡಕಟ್ಟು ಸಮುದಾಯದಗಳ ಜನಸಂಖ್ಯೆ ಹೆಚ್ಚಳವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.

‘ಈ ಯೋಜನೆಯು ಇದೇ ಜನವರಿ 1ರಿಂದ ಪೂರ್ವಾನ್ವಯವಾಗಲಿದೆ. ಉದ್ಯೋಗಿಯ ಎರಡನೇ ಅಥವಾ ಮೂರನೇ ಮಗುವು 2023ರ ಜನವರಿ 1ರಂದು ಅಥವಾ ಇದರ ನಂತರ ಜನಿಸಿರಬೇಕು. ಜೊತೆಗೆ ಮಕ್ಕಳನ್ನು ದತ್ತು ಪಡೆದಿದ್ದರೆ ಅಂಥವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ’ ಎಂದು ಸಿಬ್ಬಂದಿ ಖಾತೆ ಸಚಿವಾಲಯವು ಮೇ 10ರಂದು ಸುತ್ತೋಲೆ ಹೊರಡಿಸಿದೆ.

‘ಸಿಕ್ಕಿಂ ನಿವಾಸಿ ಎಂದು ದೃಢಪಡಿಸುವ ಪ್ರಮಾಣಪತ್ರ ಹೊಂದಿರುವ ಉದ್ಯೋಗಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಮೂವರು ಮಕ್ಕಳಿರುವ ಉದ್ಯೋಗಿಗೆ ಒಂದು ವೇತನ ಬಡ್ತಿ ನೀಡಲಾಗುವುದು. ದಂಪತಿಯಲ್ಲಿ ಯಾರಾದರೂ ಒಬ್ಬರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು’ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

‘ಸ್ಥಳೀಯ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಹೆಚ್ಚಿಸಲು ಸರ್ಕಾರವು ಕ್ರಮಕೈಗೊಳ್ಳಲಿದೆ’ ಎಂದು ಇದೇ ವರ್ಷದ ಜನವರಿಯಲ್ಲಿ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌ ಅವರು ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.