ADVERTISEMENT

ಪೌರತ್ವ ಮಸೂದೆಗೆ ಪ್ರತಿಭಟನೆ: ಶಿಲ್ಲಾಂಗ್‌ನಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 14:56 IST
Last Updated 12 ಡಿಸೆಂಬರ್ 2019, 14:56 IST
   

ಶಿಲ್ಲಾಂಗ್: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮೇಘಾಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಶಿಲ್ಲಾಂಗ್‌ನ ಹಲವಾರು ಪ್ರದೇಶಗಳಲ್ಲಿ ಗುರುವಾರ ಸಂಜೆಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ.

ಜೈವೂ, ಮಾವ್ಖಾರ್, ಉಮ್ಸೋಸುನ್, ರಿಯಾತ್‌ಸಮಿತಾ, ವಾಹಿಂಗ್‌ದೊ, ಮಿಸಿನ್, ಮಾವ್‌ಪ್ರೆಮ್, ಲುಮ್ದಿನ್ಜಿರಿ, ಲಾಮವಿಲ್ಲಾ, ಖ್ವಲಾಪಟ್ಟಿ, ವಾಹ್ತಾಬ್ರು, ಸನ್ನಿ ಹಿಲ್, ಕಂಟೋನ್ಮೆಂಟ್, ಬೌಚರ್ ರೋಡ್, ಮಾವಲಂಗ್ ಹಾಟ್, ಪೊಲೀಸ್ ಬಜಾರ್, ಜೈಲ್ ರೋಡ್, ಕೇಟಿಂಗ್ ರೋಡ್ ಮತ್ತು ಪೋಲೋ ಎಂಬಲ್ಲಿ ಕರ್ಫ್ಯೂ ಹೇರಿರುವುದಾಗಿ ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT