ADVERTISEMENT

ಜಮ್ಮುವಿನಲ್ಲಿ ವಕೀಲರ ಮುಷ್ಕರ

ಪಿಟಿಐ
Published 2 ನವೆಂಬರ್ 2019, 20:32 IST
Last Updated 2 ನವೆಂಬರ್ 2019, 20:32 IST

ಜಮ್ಮು: ಹಲವು ದಾಖಲೆಗಳನ್ನು ನೋಂದಣಿ ಮಾಡುವ ಅಧಿಕಾರವನ್ನು ಕಸಿದುಕೊಂಡು ಕಂದಾಯ ಇಲಾಖೆಗೆ ನೀಡಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಜಮ್ಮುವಿನ ಹಲವೆಡೆ ವಕೀಲರು ಶನಿವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಇದರಿಂದಾಗಿ ಹೈಕೋರ್ಟ್‌ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾದವು. ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ ವಕೀಲರ ಸಂಘದ ಜಮ್ಮು ವಿಭಾಗ ಶುಕ್ರವಾರ ಮುಷ್ಕರಕ್ಕೆ ಕರೆ ನೀಡಿತ್ತು. ಅಧಿಕಾರ ಮೊಟಕಿನ ಜತೆಗೆ ಜಾನಿಪುರದಿಂದ ನಗರದ ಹೊರವಲಯಕ್ಕೆ ಹೈಕೋರ್ಟ್‌ ಸ್ಥಳಾಂತರಿಸುವುದನ್ನೂ ವಿರೋಧಿಸಿ ಮುಷ್ಕರ ಆರಂಭಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶವಾದಜಮ್ಮು ಮತ್ತು ಕಾಶ್ಮೀರದ ನೂತನ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಜಿ.ಸಿ.ಮುರ್ಮು ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಮುಷ್ಕರ ಪ್ರಮುಖ ಸವಾಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.