ADVERTISEMENT

ನೀತಿಗೆ ಸಂಬಂಧಿಸಿದ ಕಾಯ್ದೆಯನ್ನು ನ್ಯಾಯಾಂಗ ಸ್ವಾತಂತ್ರ್ಯದ ಕಾರಣ ನೀಡುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 18:18 IST
Last Updated 18 ಅಕ್ಟೋಬರ್ 2021, 18:18 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ‘ನ್ಯಾಯಾಂಗ ಸ್ವಾತಂತ್ರ್ಯದ ಕಾರಣ ನೀಡಿ, ಸಂಸತ್‌ನಲ್ಲಿ ಅಂಗೀಕಾರವಾದ ಕಾಯ್ದೆಯೊಂದರ ಸಿಂಧುತ್ವವನ್ನು ಒರೆಗೆ ಹಚ್ಚಲಾಗದು’ ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್‌ಗೆ ತಿಳಿಸಿದೆ.

‘ಒಂದು ಕಾಯ್ದೆಯನ್ನು ರೂಪಿಸಿ, ಅಂಗೀಕರಿಸುವುದು ನೀತಿ ನಿರೂಪಣೆಗೆ ಸಂಬಂಧಿಸಿದ್ದು. ಸಂಸತ್‌ನಲ್ಲಿ ಅಂಗೀಕರಿಸಿದ ಕಾಯ್ದೆಯೊಂದನ್ನು ರದ್ದುಪಡಿಸುವುದು ಸಂವಿಧಾನದ ಮೂರು ಅಂಗಗಳ ಅಧಿಕಾರ ಪ್ರತ್ಯೇಕಿಸುವ ಮೂಲತತ್ವದ ಉಲ್ಲಂಘನೆಯಾಗುವುದು’ ಎಂದೂ ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

‘ಸಂವಿಧಾನ ರಚನೆಯ ಮೂಲ ತತ್ವಗಳನ್ನು ಬಳಸಿ ಸಂವಿಧಾನ ತಿದ್ದುಪಡಿಯೊಂದನ್ನು ರದ್ದು ಮಾಡಬಹುದು. ಆದರೆ, ಸಂಸತ್‌ ಅಂಗೀಕರಿಸಿದ ಶಾಸನವನ್ನು ರದ್ದುಪಡಿಸಲಾಗದು’ ಎಂದೂ ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

ADVERTISEMENT

‘ನ್ಯಾಯಮಂಡಳಿಗಳ ಸುಧಾರಣೆ ಕಾಯ್ದೆ–2021’ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಈ ವಿವರಣೆ ನೀಡಿದೆ.

ಕಾಯ್ದೆಯ ಸಿಂಧುತ್ವವನ್ನು ‍ಪ್ರಶ್ನಿಸಿ ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌ ಸೇರಿದಂತೆ ಹಲವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.