ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪು ಕೋಟೆಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು. ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ ಕ್ರೀಡಾಪಟುಗಳನ್ನು ಕೊಂಡಾಡಿದರು. ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲಾಯಿತು ಹಾಗೂ ಭದ್ರತಾ ಪಡೆಗಳಿಂದ ಪೂರ್ಣ ಪ್ರಮಾಣದ ಕವಾಯತು ಕಾರ್ಯಕ್ರಮಗಳು ನಡೆಯಲಿಲ್ಲ.
ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 8:50 IST
Last Updated 15 ಆಗಸ್ಟ್ 2021, 8:50 IST
ಗೌರವ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ
ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ಕ್ರೀಡಾಪಟುಗಳು ಕೆಂಪು ಕೋಟೆಯಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗಿಯಾದರು.
ಒಲಿಂಪಿಕ್ಸ್ ಪದಕ ವಿಜೇತರಾದ ಪಿ.ವಿ.ಸಿಂಧು, ಬಜರಂಗ್ ಪೂನಿಯಾ, ರವಿ ಕುಮಾರ್ ದಹಿಯಾ ಅವರೊಂದಿಗೆ ಸೆಲ್ಫಿ
ದೆಹಲಿಯ ಕೆಂಪು ಕೋಟೆಯ ಮುಂದೆ ಬಾಕ್ಸರ್ ಮೇರಿ ಕೋಮ್ ಸಲ್ಯೂಟ್
ಕ್ರೀಡಾಪಟುಗಳು, ಎನ್ಸಿಸಿ ಕೆಡೆಟ್ಗಳತ್ತ ಬಂದು ಕೈಬೀಸಿದ ಪ್ರಧಾನಿ ನರೇಂದ್ರ ಮೋದಿ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಸ್ಪರ ನಮಿಸಿದ ಕ್ಷಣ
ಕೆಂಪು ಕೋಟೆಯ ಮೇಲೆ ಚಪ್ಟಾಳೆ ತಟ್ಟುವ ಮೂಲಕ ಕ್ರೀಡಾಪಟುಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ
75ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾದ ಎನ್ಸಿಸಿ ಕೆಡೆಟ್ಗಳು, ಕ್ರೀಡಾಪಟುಗಳು ಪರಸ್ಪರ ಅಂತರ ಕಾಯ್ದುಕೊಂಡು ಕುಳಿತಿರುವುದು
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಪಟು ನೀರಜ್ ಚೋಪ್ರಾ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಭದ್ರತಾ ಸಿಬ್ಬಂದಿ
ನವದೆಹಲಿಯಲ್ಲಿ ರಸ್ತೆಯೊಂದರ ಬದಿಯಲ್ಲಿ ತ್ರಿವರ್ಣ ಧ್ವಜ ಮಾರಾಟ
ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ
ಪ್ರಧಾನಿ ಮೋದಿ ಹೊರಡುವುದಕ್ಕೂ ಮುನ್ನ ಕಾರ್ಯಕ್ರಮದ ಆಹ್ವಾನಿತರತ್ತ ಕೈಬಿಸಿದರು
ಕೆಂಪು ಕೋಟೆಯ ಮೇಲೆ ಹೂವಿನ ಮಳೆ ಸುರಿಸಿದ ಎಂಐ–17 ಹೆಲಿಕಾಪ್ಟರ್
ಕೆಂಪು ಕೋಟೆಯ ಮೇಲೆ ಹೂವಿನ ಮಳೆ ಸುರಿಸಿದ ಎಂಐ–17 ಹೆಲಿಕಾಪ್ಟರ್
ಭದ್ರತಾ ಪಡೆಗಳ ಗೌರವ ಸ್ವೀಕರಿಸಿ ಸಲ್ಯೂಟ್ ಮಾಡಿದ ಪ್ರಧಾನಿ ಮೋದಿ
ಭಾಷಣದ ನಡುವೆ ಕಂಡ ಪ್ರಧಾನಿ ನರೇಂದ್ರ ಮೋದಿ
ಭಾರತದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಟ್ಟಾರಿ–ವಾಘಾ ಗಡಿಯಲ್ಲಿ ಬಿಎಸ್ಎಫ್ ಸಿಬ್ಬಂದಿ ಪಾಕಿಸ್ತಾನದ ಸೇನಾ ಸಿಬ್ಬಂದಿಗೆ ಸಿಹಿ ನೀಡಿದರು
ಕೆಂಪು ಕೋಟೆಯಲ್ಲಿ ಭಾರತೀಯ ಸೇನಾ ಪಡೆಯ ಕವಾಯತು
ಶ್ರೀನಗರದ ಸ್ವಾತಂತ್ರೋತ್ಸವದ ಸಮಾರಂಭದಲ್ಲಿ ಭಾಗಿಯಾದ ಭದ್ರತಾ ಸಿಬ್ಬಂದಿ ಮಾಸ್ಕ್ ಧರಿಸಿರುವುದು
ಧ್ವಜಾರೋಹಣ ಕಾರ್ಯಕ್ರಮಕ್ಕೂ ಮುಂಚೆ ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ