ADVERTISEMENT

ಭದ್ರತಾ ನೆರವು | ಭಾರತ ಅತ್ಯುತ್ತಮ ಉದಾಹರಣೆ ಎಂದ ಪೆಂಟಗನ್‌

ಪಿಟಿಐ
Published 18 ಜನವರಿ 2023, 13:49 IST
Last Updated 18 ಜನವರಿ 2023, 13:49 IST
.
.   

ವಾಷಿಂಗ್ಟನ್‌: ಅಮೆರಿಕದಿಂದ ಭದ್ರತಾ ನೆರವು ಪಡೆಯುತ್ತಿರುವ ರಾಷ್ಟ್ರಗಳಿಗೆ ಭಾರತ ‘ಅತ್ಯುತ್ತಮ ಉದಾಹರಣೆ’ ಎಂದು ಪೆಂಟಗನ್‌ ಹೇಳಿದೆ. ಇದೇ ವೇಳೆ, ರಷ್ಯಾದೊಂದಿಗಿನ ಸಂಬಂಧ ಕಡಿದುಕೊಂಡು ಪೂರ್ಣಪ್ರಮಾಣದಲ್ಲಿ ಅಮೆರಿಕದ ಭದ್ರತಾ ನೆರವು ಕೇಳಿದರೂ ಅದನ್ನು ಒದಗಿಸಲು ಸಿದ್ಧ ಎಂದು ತಿಳಿಸಿದೆ.

‘ರಷ್ಯಾ ಅಥವಾ ಸೋವಿಯತ್‌ ಕಾಲದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ ಕೆಲವು ದೇಶಗಳು ರಷ್ಯಾದೊಂದಿಗೆ ಒಂದು ರೀತಿಯ ಬಾಂಧವ್ಯವನ್ನು ಉಳಿಸಿಕೊಳ್ಳಲು ಬಯಸುತ್ತವೆ. ಹಲವು ದೇಶಗಳು ರಷ್ಯಾದೊಂದಿಗೆ ಭದ್ರತೆ ವಿಚಾರದಲ್ಲಿ ಬಾಂಧವ್ಯ ಹೊಂದಿವೆ. ಇದು ಆಯಾ ದೇಶಗಳ ಸಾರ್ವಭೌಮ ನಿರ್ಧಾರ. ಅಮೆರಿಕ ಅದನ್ನು ಗೌರವಿಸುತ್ತದೆ’ ಎಂದು ವಕ್ತಾರ ಪ್ಯಾಟ್‌ ರೈಡರ್ ತಿಳಿಸಿದರು.

1997ರಲ್ಲಿ ಭಾರತ–ಅಮೆರಿಕ ನಡುವಿನ ರಕ್ಷಣಾ ವ್ಯಾಪಾರ ವಹಿವಾಟು ಅತ್ಯಲ್ಪವಾಗಿತ್ತು. ಇಂದು ₹1.62 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ವ್ಯವಹಾರ ನಡೆಯುತ್ತಿದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.