ADVERTISEMENT

ಭಾರತದ ಹಿತಾಸಕ್ತಿಗೆ ವಿರುದ್ಧ ನಮ್ಮ ನೆಲ ಬಳಕೆ ಮಾಡಲು ಬಿಡುವುದಿಲ್ಲ: ಅಫ್ಗಾನ್

ಪಿಟಿಐ
Published 10 ಅಕ್ಟೋಬರ್ 2025, 10:16 IST
Last Updated 10 ಅಕ್ಟೋಬರ್ 2025, 10:16 IST
<div class="paragraphs"><p>ಅಮೀರ್ ಖಾನ್ ಮುತ್ತಾಖಿ</p></div>

ಅಮೀರ್ ಖಾನ್ ಮುತ್ತಾಖಿ

   

(ಪಿಟಿಐ ಚಿತ್ರ)

ನವದೆಹಲಿ: ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ತಮ್ಮ ನೆಲವನ್ನು ಬಳಕೆ ಮಾಡಲು ಬಿಡುವುದಿಲ್ಲ ಎಂದು ಅಫ್ಗಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಭರವಸೆ ನೀಡಿದ್ದಾರೆ.

ADVERTISEMENT

ಭಾರತ ಪ್ರವಾಸದಲ್ಲಿರುವ ಅಮೀರ್, ವಿದೇಶಾಂಗ ಸಚಿವ ಎಸ್.‌ಜೈಶಂಕರ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ.

'ಅಮೆರಿಕದ ಆಕ್ರಮಣದ ಸಂದರ್ಭದಲ್ಲೂ ನಾವು ಎಂದಿಗೂ ಭಾರತದ ವಿರುದ್ಧ ಹೇಳಿಕೆ ನೀಡಿಲ್ಲ. ಭಾರತದೊಂದಿಗಿನ ದ್ವಿಪಕ್ಷೀಯ ಬಾಂಧವ್ಯವನ್ನು ನಾವು ಯಾವತ್ತೂ ಗೌರವಿಸುತ್ತೇವೆ. ಯಾವುದೇ ಸೇನೆಯು ನಮ್ಮ ಭೂಪ್ರದೇಶವನ್ನು ಬೇರೆ ದೇಶಗಳ ವಿರುದ್ಧ ಬಳಕೆ ಮಾಡಲು ಬಿಡುವುದಿಲ್ಲ' ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅಫ್ಗಾನಿಸ್ತಾನದಲ್ಲಿ ಭಾರತದ ರಾಯಭಾರ ಕಚೇರಿ ಪುನರಾರಂಭಿಸುವುದಾಗಿ ಎಸ್.ಜೈಶಂಕರ್ ಭರವಸೆ ನೀಡಿದ್ದಾರೆ.

ಅಲ್ಲದೆ ಅಫ್ಗಾನಿಸ್ತಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುವ ಮೂಲಕ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.