ADVERTISEMENT

‘ಚೀನಾ ಜತೆ ಗೌಪ್ಯ ಮಾತುಕತೆ’

ಪಿಟಿಐ
Published 15 ಅಕ್ಟೋಬರ್ 2020, 20:54 IST
Last Updated 15 ಅಕ್ಟೋಬರ್ 2020, 20:54 IST
ಸಚಿವ ಜೈಶಂಕರ್
ಸಚಿವ ಜೈಶಂಕರ್   

ನವದೆಹಲಿ: ‘ಚೀನಾ ಜತೆಗಿನ ಗಡಿ ಸಂಘರ್ಷ ಕುರಿತು ಗೌಪ್ಯ ಮಾತುಕತೆ ನಡೆಯುತ್ತಿದೆ. ಸಂಬಂಧಿತ ಪ್ರಕ್ರಿಯೆಗಳು ಜಾರಿಯಲ್ಲಿವೆ. ಅದರ ಫಲಿತಾಂಶ ಇದೇ ಆಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿದ್ದಾರೆ.

ಬ್ಲೂಂಬರ್ಗ್ ಇಂಡಿಯಾ ಎಕನಾಮಿಕ್ ಫೋರಂ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದ್ದಾರೆ. ‘ವಾಸ್ತವ ನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು ಎಂಬ ಬದ್ಧತೆಯ ಆಧಾರದಲ್ಲೇ ಮೂರು ದಶಕಗಳಲ್ಲಿ ಭಾರತ-ಚೀನಾದ ಸಂಬಂಧ ಅಭಿವೃದ್ಧಿಯಾಗಿದೆ. ಈ ಮೂಲಬದ್ಧತೆಗೆ ಧಕ್ಕೆಯಾದರೆ, ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಆ ಬದ್ಧತೆಗೆ ಭಾರತವು ಧಕ್ಕೆ ತಂದಿಲ್ಲ ಎಂಬುದನ್ನು ಗಮನಿಸಬೇಕು’ ಎಂದು ಅವರು ಹೇಳಿದ್ದಾರೆ.

ಲಡಾಖ್ ಭಾರತದ ಅವಿಭಾಜ್ಯ ಭಾಗ: ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಭಾಗ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.