ADVERTISEMENT

ಭಾರತ–ಚೀನಾ ನಡುವೆ 11ನೇ ಸುತ್ತಿನ ಮಿಲಿಟರಿ ಮಾತುಕತೆ ಆರಂಭ

ಪಿಟಿಐ
Published 9 ಏಪ್ರಿಲ್ 2021, 12:01 IST
Last Updated 9 ಏಪ್ರಿಲ್ 2021, 12:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೂರ್ವ ಲಡಾಖ್‌ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿದ್ದ ಸ್ಥಳಗಳಿಂದ ಉಭಯ ದೇಶಗಳ ಸೇನೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಮುಂದುವರಿಸುವ ಸಂಬಂಧ ಭಾರತ ಮತ್ತು ಚೀನಾ ಸೇನೆಗಳ ಕಮಾಂಡರ್‌ಗಳ ಮಟ್ಟದ 11ನೇ ಸುತ್ತಿನ ಮಾತುಕತೆ ಶುಕ್ರವಾರ ನಡೆಯಿತು.

‘ಪೂರ್ವ ಲಡಾಖ್‌ ಬಳಿಯ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪದ ಚುಶುಲ್ ಗಡಿಠಾಣೆಯಲ್ಲಿ ಈ 11ನೇ ಸುತ್ತಿನ ಮಾತುಕತೆ ಆರಂಭವಾಗಿದೆ. ಭಾರತದ ನಿಯೋಗದ ನೇತೃತ್ವವನ್ನು ಲೆಫ್ಟಿನೆಂಟ್‌ ಜನರಲ್‌ ಪಿ.ಜಿ.ಕೆ.ಮೆನನ್‌ ವಹಿಸಿದ್ದಾರೆ.

‘ಡೆಪ್‌ಸ್ಯಾಂಗ್‌, ಗೋಗ್ರಾ ಮತ್ತು ಹಾಟ್‌ಸ್ಟ್ರಿಂಗ್ಸ್‌ ಪ್ರದೇಶದಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಯ ರೂಪುರೇಷೆ ಅಂತಿಮಗೊಳಿಸುವ ಕುರಿತಂತೆ ಈ ಮಾತುಕತೆ ವೇಳೆ ಚರ್ಚಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.