ADVERTISEMENT

ಅಣುಶಕ್ತಿ ಸಾಮರ್ಥ್ಯ:ಭಾರತ–ಪಾಕಿಸ್ತಾನನಡುವೆ ಮಾಹಿತಿ ವಿನಿಮಯ

ಪಿಟಿಐ
Published 1 ಜನವರಿ 2021, 15:09 IST
Last Updated 1 ಜನವರಿ 2021, 15:09 IST

ನವದೆಹಲಿ: ಕಳೆದ 30 ವರ್ಷಗಳಿಂದ ಚಾಲ್ತಿಯಲ್ಲಿರುವ ಕ್ರಮದಂತೆ, ದ್ವಿಪಕ್ಷೀಯ ಒಪ್ಪಂದಕ್ಕೆ ಅನುಗುಣವಾಗಿ ಭಾರತ ಮತ್ತು ಪಾಕಿಸ್ತಾನ ಶುಕ್ರವಾರ ಅಣುಶಕ್ತಿ ಸಾಮರ್ಥ್ಯ ಕುರಿತ ಮಾಹಿತಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡವು.

ಎರಡೂ ರಾಷ್ಟ್ರಗಳಲ್ಲಿರುವ ಅಣು ಘಟಕಗಳ ಮೇಲೆ ಪರಸ್ಪರ ದಾಳಿ ನಡೆಸದಂತೆಈ ಒಪ್ಪಂದ ನಿರ್ಬಂಧ ಹೇರುತ್ತದೆ. ನವದೆಹಲಿ ಮತ್ತು ಇಸ್ಲಾಮಾಬಾದ್‌ದಲ್ಲಿ ಇರುವ ಪರಸ್ಪರ ರಾಜತಾಂತ್ರಿಕ ವ್ಯವಸ್ಥೆಯ ಮೂಲಕ ಈ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಕಾಶ್ಮೀರ ವಿವಾದ ಮತ್ತು ಗಡಿರೇಖೆಯುದ್ದಕ್ಕೂ ಇರುವ ಭಯೋತ್ಪಾದನಾ ಆತಂಕದ ಸ್ಥಿತಿಯ ನಡುವೆ ಈ ಮಾಹಿತಿಯ ವಿನಿಮಯ ನಡೆದಿದೆ. ಉಭಯ ದೇಶಗಳ ನಡುವೆ 1988ರ ಡಿಸೆಂಬರ್ 31ರಂದು ಒಪ್ಪಂದವಾಗಿದ್ದು, ಇದು 1991ರ ಜನವರಿ 27ರಿಂದ ಜಾರಿಗೆ ಬಂದಿದೆ. ಪ್ರತಿ ವರ್ಷ ಜ.1ರಂದು ಈ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.