ADVERTISEMENT

ಮಲ್ಯಗೆ ಆಶ್ರಯ ಬೇಡ: ಬ್ರಿಟನ್‌ಗೆ ಭಾರತ ಮನವಿ

ಪಿಟಿಐ
Published 11 ಜೂನ್ 2020, 19:45 IST
Last Updated 11 ಜೂನ್ 2020, 19:45 IST
ವಿಜಯ್ ಮಲ್ಯ
ವಿಜಯ್ ಮಲ್ಯ   

ನವದೆಹಲಿ: ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರು ಆಶ್ರಯ ಕೋರಿ ಸಲ್ಲಿಸುವ ಯಾವುದೇ ಮನವಿಯನ್ನು ಪರಿಗಣಿಸಬಾರದು ಎಂದು ಭಾರತ ಗುರುವಾರ ಬ್ರಿಟನ್‌ಗೆ ಹೇಳಿದೆ.

ಮಲ್ಯ ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇಲ್ಲವೆಂದು ಬ್ರಿಟನ್ ಕಳೆದ ವಾರವೇ ಸೂಚನೆ ನೀಡಿತ್ತು. ಹಸ್ತಾಂತರಕ್ಕೂ ಮೊದಲು ಕಾನೂನು ಸಮಸ್ಯೆ ಬಗೆಹರಿಯಬೇಕೆಂದು ಬ್ರಿಟನ್ ಹೇಳಿತ್ತು.

‘ಮಲ್ಯ ಅವರನ್ನು ಶೀಘ್ರವೇ ಭಾರತಕ್ಕೆ ಹಸ್ತಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಾವು ಬ್ರಿಟನ್‌ನೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತದಲ್ಲಿ ಮಲ್ಯಗೆ ಕಿರುಕುಳ ನೀಡುವ ಕುರಿತು ಯಾವುದೇ ಆಧಾರವಿಲ್ಲ. ಹಾಗಾಗಿ, ಆಶ್ರಯ ಕೋರಿ ಮಲ್ಯ ಸಲ್ಲಿಸುವ ಮನವಿಯನ್ನು ಪರಿಗಣಿಸಬಾರದು ಎಂದು ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಆನ್‌ಲೈನ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.