ADVERTISEMENT

ವಿಶ್ವಸಂಸ್ಥೆ ನಿಧಿಗೆ ₹112.24 ಕೋಟಿ ನೀಡಿದ ಭಾರತ

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಬೆಂಬಲ

ಪಿಟಿಐ
Published 5 ಆಗಸ್ಟ್ 2020, 11:37 IST
Last Updated 5 ಆಗಸ್ಟ್ 2020, 11:37 IST
ವಿಶ್ವಸಂಸ್ಥೆ 
ವಿಶ್ವಸಂಸ್ಥೆ    

ವಿಶ್ವಸಂಸ್ಥೆ: ‘ಭಾರತ– ವಿಶ್ವಸಂಸ್ಥೆ ಅಭಿವೃದ್ಧಿ ಸಹಭಾಗಿತ್ವ ನಿಧಿ’ಗೆ ₹112.24 ಕೋಟಿ ನೀಡುವ ಮೂಲಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಭಾರತವುತನ್ನ ಬೆಂಬಲದ ಬದ್ಧತೆ ತೋರಿಸಿದೆ ಎಂದು ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಆಗಿರುವ ಟಿ.ಎಸ್‌.ತಿರುಮೂರ್ತಿ ಅವರು ಯುಎನ್‌ಒಎಸ್‌ಎಸ್‌ಸಿ ನಿರ್ದೇಶಕ ಜಾರ್ಜ್‌ ಚೆಡಿಕ್‌ ಅವರಿಗೆ ಮಂಗಳವಾರ ಈ ಚೆಕ್‌ ಹಸ್ತಾಂತರಿಸಿದರು. ನಿಧಿಯನ್ನು ಯುಎನ್‌ಒಎಸ್‌ಎಸ್‌ಸಿ ನಿರ್ವಹಣೆ ಮಾಡುತ್ತಿದ್ದು, ಅಭಿವೃದ್ಧಿ ಹೊಂದುತ್ತಿರುವ ಪಾಲುದಾರ ರಾಷ್ಟ್ರಗಳ ನಾಯಕತ್ವದಲ್ಲಿ ಯೋಜನೆಗಳು ಅನುಷ್ಠಾನಗೊಳ್ಳಲಿವೆ.

‘ಕೋವಿಡ್‌–19 ಪಿಡುಗಿನ ಈ ಸಂದರ್ಭದಲ್ಲಿ ಪಾಲುದಾರ ರಾಷ್ಟ್ರಗಳ ನಡುವಿನ ಒಗ್ಗಟ್ಟು ಮತ್ತಷ್ಟು ಸದೃಢವಾಗಿದೆ. ಹಲವು ರಾಷ್ಟ್ರಗಳು ಸಂಕಷ್ಟದಲ್ಲಿದ್ದು, ಇಂಥ ಸ್ಥಿತಿಯಲ್ಲಿ ಪರಸ್ಪರ ಬೆಂಬಲ ಹಾಗೂ ಸಹಕಾರದ ಅಗತ್ಯ ಹೆಚ್ಚಿದೆ. ಸಂಕಷ್ಟದ ನಡುವೆಯೂ ಭಾರತ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ’ ಎಂದು ಯುಎನ್‌ಒಎಸ್‌ಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.