ADVERTISEMENT

ಮುಂದಿನ ವಾರ ಕೋವಿಡ್‌ ಸಂಖ್ಯೆಯಲ್ಲಿ ಹೆಚ್ಚಳ: ವಿಜ್ಞಾನಿಗಳ ತಂಡದ ವಿಶ್ಲೇಷಣೆ

ರಾಯಿಟರ್ಸ್
Published 30 ಏಪ್ರಿಲ್ 2021, 21:43 IST
Last Updated 30 ಏಪ್ರಿಲ್ 2021, 21:43 IST
   

ನವದೆಹಲಿ: ಭಾರತದಲ್ಲಿ ಮುಂದಿನ ವಾರ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.

ನಿರೀಕ್ಷೆಗೂ ಮೀರಿ ವೈರಸ್‌ ವೇಗದಲ್ಲಿ ಹಬ್ಬಿರುವುದರಿಂದ ಮೇ 3ರಿಂದ 5ರ ಅವಧಿಯಲ್ಲಿ ಈ ಸಂಖ್ಯೆಗಳು ಹೆಚ್ಚಾಗಲಿವೆ ಎಂದು ಗಣಿತದ ಮಾದರಿಯನ್ನು ಅನುಸರಿಸಿ ವಿಜ್ಞಾನಿಗಳ ತಂಡ ವಿಶ್ಲೇಷಿಸಿದೆ.

‘ಮುಂದಿನ ವಾರ ದೇಶದಾದ್ಯಂತ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತದೆ ಎನ್ನುವುದು ನಮ್ಮ ಅಭಿಪ್ರಾಯ’ ಎಂದು ಸೋಂಕಿನ ಕುರಿತು ಅಧ್ಯಯನಕ್ಕೆ ಸರ್ಕಾರ ನೇಮಿಸಿರುವ ವಿಜ್ಞಾನಿಗಳ ತಂಡದ ಮುಖ್ಯಸ್ಥ ಎಂ. ವಿದ್ಯಾಸಾಗರ ಹೇಳಿದ್ದಾರೆ.

ADVERTISEMENT

’ಮುಂದಿನ ನಾಲ್ಕು ಅಥವಾ ಆರು ವಾರಗಳಲ್ಲಿ ಯಾವ ರೀತಿಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.