ADVERTISEMENT

ಯಾಸಿನ್‌ ಮಲಿಕ್‌ಗೆ ಶಿಕ್ಷೆ: ಒಐಸಿ ಹೇಳಿಕೆಗೆ ಭಾರತ ಟೀಕೆ

ಪಿಟಿಐ
Published 28 ಮೇ 2022, 11:46 IST
Last Updated 28 ಮೇ 2022, 11:46 IST
ಅರಿಂದಮ್ ಬಾಗ್ಚಿ
ಅರಿಂದಮ್ ಬಾಗ್ಚಿ   

ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್ ಪ್ರಕರಣದಲ್ಲಿ ಕೋರ್ಟ್‌ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ದೇಶದ ವಿರುದ್ಧ ಇಸ್ಲಾಮಿಕ್‌ ಸಹಕಾರ ಸಂಘಟನೆಯ ಶಾಶ್ವತ ಮಾನವ ಹಕ್ಕುಗಳ ಆಯೋಗ (ಒಐಸಿ–ಐಪಿಎಚ್‌ಆರ್‌ಸಿ) ಮಾಡಿರುವ ಟೀಕೆ ಒಪ್ಪಲಾಗದು ಎಂದು ಭಾರತ ತಿರುಗೇಟು ನೀಡಿದೆ.

‘ಭಯೋತ್ಪಾದನೆ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಇಂಥ ಸನ್ನಿವೇಶದಲ್ಲಿ, ಭಾರತದ ವಿರುದ್ಧ ಆಯೋಗ ಮಾಡಿರುವ ಟೀಕೆಗಳನ್ನು ಇಸ್ಲಾಮಿಕ್‌ ಸಹಕಾರ ಸಂಘಟನೆಯು (ಒಐಸಿ) ಯಾವ ರೀತಿಯಲ್ಲೂ ಸಮರ್ಥನೆ ಮಾಡಿಕೊಳ್ಳಬಾರದು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ.

‘ಯಾಸಿನ್‌ ಮಲಿಕ್ ನಡೆಸಿದ್ದ ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಎನ್‌ಐಎ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಈಗ, ಒಐಸಿ–ಐಪಿಎಚ್‌ಆರ್‌ಸಿ ನೀಡಿರುವ ಹೇಳಿಕೆಗಳು ಮಲಿಕ್‌ನ ಕೃತ್ಯಗಳಿಗೆ ಸೂಚ್ಯವಾಗಿ ಬೆಂಬಲ ನೀಡುವಂತಿವೆ’ ಎಂದಿದ್ದಾರೆ.

ADVERTISEMENT

ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಯಾಸಿನ್‌ ಮಲಿಕ್‌ಗೆ ಎನ್‌ಐಎ ವಿಶೇಷ ಕೋರ್ಟ್‌ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.