ADVERTISEMENT

Covid-19 India Updates| 24 ಗಂಟೆಗಳಲ್ಲಿ ಅತ್ಯಧಿಕ ಸೋಂಕು ಪ್ರಕರಣಗಳು ಪತ್ತೆ 

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 4:37 IST
Last Updated 13 ಜೂನ್ 2020, 4:37 IST
   

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಒಟ್ಟು 11,458 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದು ದಿನವೊಂದರಲ್ಲಿ ವರದಿಯಾದ ಅತ್ಯಧಿಕ ಪ್ರಕರಣಗಳಾಗಿವೆ.

ದೇಶದಲ್ಲಿ ಈ ವರೆಗೆ 3,08,993 ಸೋಂಕು ಪ್ರಕರಣಗಳು ದೃಢವಾಗಿದ್ದು, ಈ ಪೈಕಿ 1,54,330 ಗುಣಮುಖರಾಗಿದ್ದಾರೆ. 1,45,779 ಪ್ರಕರಣಗಳು ಸಕ್ರಿಯವಾಗಿವೆ. ಭಾರತದಲ್ಲಿ ಸಕ್ರಿಯ ಪ್ರಕಣಗಳಿಗಿಂತಲೂ ಗುಣಮುಖರಾಗುತ್ತಿರುವವರ ಪ್ರಮಾಣ ಅಧಿಕವಾಗಿರುವುದು ಆಶಾಭಾವ ಮೂಡಿಸಿದೆ.

ಇನ್ನು 24 ಗಂಟೆ ಅವಧಿಯಲ್ಲಿ ದೇಶದಲ್ಲಿ 386 ಮಂದಿ ಕೊರೊನಾ ವೈರಸ್‌ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಸಾವಿನ ಸಂಖ್ಯೆ 8,884ಕ್ಕೆ ಏರಿಕೆಯಾಗಿದೆ.

ADVERTISEMENT

ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ಗುಜರಾತ್‌ನಲ್ಲಿ ಕೊರೊನಾ ವೈರಸ್‌ ಸೋಂಕು ಉಲ್ಭಣಗೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ ಒಟ್ಟು ಸೋಂಕು ಪ್ರಕರಣಗಳು 1 ಲಕ್ಷದ ಗಡಿ ದಾಟಿದೆ. ತಮಿಳುನಾಡಿನಲ್ಲಿ 40,698 ಪ್ರಕರಣಗಳು, ದೆಹಲಿಯಲ್ಲಿ 36,824, ಗುಜರಾತ್‌ನಲ್ಲಿ 22,527 ಪ್ರಕರಣಗಳಿವೆ.

ಈ ಮಧ್ಯೆ, ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ವೇಗವಾಗಿ ಮೇಲೇರುತ್ತಿದೆ. 15 ದಿನಗಳ ಹಿಂದೆ ಹತ್ತನೇ ಸ್ಥಾನದಲ್ಲಿದ್ದ ಭಾರತ ಸದ್ಯ 4ನೇ ಸ್ಥಾನದಲ್ಲಿದೆ. ಶುಕ್ರವಾರ ಬ್ರಿಟನ್‌ ಅನ್ನು ಭಾರತ ಹಿಂದಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.