ADVERTISEMENT

ಎಲ್‌ಎಸಿಯಲ್ಲಿರುವ ಯೋಧರಿಗೆ ಅಗತ್ಯ ಸಾಮಗ್ರಿ ಪೂರೈಕೆಗೆ ಯುದ್ಧವಿಮಾನ ನಿಯೋಜನೆ

ಚೀನಾದೊಂದಿಗಿನ ಸಂಘರ್ಷ ಈ ಚಳಿಗಾಲದಲ್ಲೂ ಮುಂದುವರಿಯುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 11:06 IST
Last Updated 17 ನವೆಂಬರ್ 2021, 11:06 IST
ವಾಯುಪಡೆಯ ‘ಸಿ–17 ಗ್ಲೋಬ್‌ಮಾಸ್ಟರ್‌’ ಹಾಗೂ ಇತರ ಯುದ್ಧವಿಮಾನಗಳು ಎಲ್‌ಎಸಿಯಲ್ಲಿರುವ ಯೋಧರಿಗೆ ಅಗತ್ಯ ವಸ್ತುಗಳನ್ನು ಹೊತ್ತೊಯ್ಯಲು ವೆಸ್ಟರ್ನ್‌ ಏರ್‌ ಕಮಾಂಡ್‌ನ ಮುಂಚೂಣಿ ನೆಲೆಯೊಂದರಲ್ಲಿ ಸನ್ನದ್ಧವಾಗಿವೆ –ಪಿಟಿಐ ಚಿತ್ರ
ವಾಯುಪಡೆಯ ‘ಸಿ–17 ಗ್ಲೋಬ್‌ಮಾಸ್ಟರ್‌’ ಹಾಗೂ ಇತರ ಯುದ್ಧವಿಮಾನಗಳು ಎಲ್‌ಎಸಿಯಲ್ಲಿರುವ ಯೋಧರಿಗೆ ಅಗತ್ಯ ವಸ್ತುಗಳನ್ನು ಹೊತ್ತೊಯ್ಯಲು ವೆಸ್ಟರ್ನ್‌ ಏರ್‌ ಕಮಾಂಡ್‌ನ ಮುಂಚೂಣಿ ನೆಲೆಯೊಂದರಲ್ಲಿ ಸನ್ನದ್ಧವಾಗಿವೆ –ಪಿಟಿಐ ಚಿತ್ರ   

ನವದೆಹಲಿ: ಚೀನಾದೊಂದಿಗಿನ ಸಂಘರ್ಷಈ ಚಳಿಗಾಲದಲ್ಲೂ ಮುಂದುವರಿಯವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಕರ್ತವ್ಯದಲ್ಲಿರುವ ಯೋಧರಿಗೆ ಅಗತ್ಯವಿರುವ ಸಾಮಗ್ರಿಗಳ ಪೂರೈಕೆಗಾಗಿ ಭಾರತ ಮಿಲಿಟರಿ ವಿಮಾನಗಳನ್ನು ನಿಯೋಜಿಸಿದೆ.

ಈ ಕಾರ್ಯಾಚರಣೆಗೆ ‘ಆಪರೇಷನ್‌ ಹರ್ಕ್ಯುಲಸ್‌’ ಎಂದು ಹೆಸರಿಡಲಾಗಿದೆ. ವಾಯುಪಡೆಯ ಸಿ–17, ಐಎಲ್‌–76 ಹಾಗೂ ಎಎನ್‌–32 ಯುದ್ಧವಿಮಾನಗಳನ್ನು ಮಂಗಳವಾರ ಈ ಕಾರ್ಯಾಚರಣೆಗೆ ಅಣಿಗೊಳಿಸಲಾಯಿತು.

‘ಆಹಾರ, ಉಡುಪುಗಳು, ಇಂಧನ ಸೇರಿದಂತೆ ಯೋಧರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಈ ಯುದ್ಧವಿಮಾನಗಳು ಸಾಗಾಟ ಮಾಡಲಿವೆ’ ಎಂದು ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

‘ಅಗತ್ಯ ಸಾಮಗ್ರಿಗಳನ್ನು ಹೊತ್ತ ವಾಯುಪಡೆ ಮೊದಲ ವಿಮಾನವೊಂದು ವೆಸ್ಟರ್ನ್ ಏರ್‌ ಕಮಾಂಡ್‌ನ ಮುಂಚೂಣಿ ನೆಲೆಯೊಂದರಿಂದ ಎಲ್‌ಎಸಿಯತ್ತ ಪ್ರಯಾಣ ಬೆಳೆಸಿತು’ ಎಂದೂ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.