ADVERTISEMENT

ಭಾರತದಲ್ಲಿ ಸಮುದಾಯ ಮಟ್ಟದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿ: ಸಿಸಿಎಂಬಿ ವಿಜ್ಞಾನಿ

ಬಿಎಫ್‌.7 ಸೋಂಕಿನ ಬಗ್ಗೆ ಆತಂಕ ಅನಗತ್ಯ ಎಂದು ಅಭಿಪ್ರಾಯ

ಪಿಟಿಐ
Published 25 ಡಿಸೆಂಬರ್ 2022, 11:12 IST
Last Updated 25 ಡಿಸೆಂಬರ್ 2022, 11:12 IST
   

ಹೈದರಾಬಾದ್: ‘ಕೋವಿಡ್‌–19ಗೆ ಸಂಬಂಧಿಸಿ ಭಾರತದಲ್ಲಿ ಸಮುದಾಯ ಮಟ್ಟದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿದೆ. ಹೀಗಾಗಿ, ಚೀನಾದಲ್ಲಿ ಈಗ ಆತಂಕಕ್ಕೆ ಕಾರಣವಾಗಿರುವ ವೈರಸ್‌ನ ಬಿಎಫ್‌.7 ಉಪತಳಿಯ ಸೋಂಕು ಭಾರತದಲ್ಲಿ ಗಂಭೀರ ಸ್ವರೂಪದ್ದಾಗಿರುವುದಿಲ್ಲ’ ವಿಜ್ಞಾನಿಗಳು ಹೇಳಿದ್ದಾರೆ.

‘ವೈರಸ್‌ನ ಯಾವುದೇ ರೂಪಾಂತರಿ ತಳಿಯಾದರೂ ಸರಿ ಎಲ್ಲರೂ ಕೋವಿಡ್‌ಗೆ ಸಂಬಂಧಿಸಿದ ಶಿಷ್ಟಾಚಾರವನ್ನು ಪಾಲಿಸುವುದು ಮುಖ್ಯ’ ಎಂದು ಸಿಎಸ್‌ಐಆರ್‌ನ ಅಂಗಸಂಸ್ಥೆಯಾದ ಸೆಂಟರ್‌ ಫಾರ್‌ ಸೆಲ್ಯುಲಾರ್ ಅಂಡ್‌ ಮಾಲೆಕ್ಯುಲಾರ್ ಬಯೋಲಜಿ (ಸಿಸಿಎಂಬಿ) ನಿರ್ದೇಶಕ ವಿನಯ್.ಕೆ.ನಂದಿಕೂರಿ ಹೇಳಿದ್ದಾರೆ.

‘ಕೊರೊನಾ ವೈರಸ್‌ನ ಎಲ್ಲ ರೂಪಾಂತರಿ ತಳಿಗಳು ವ್ಯಕ್ತಿಯ ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಲಸಿಕೆ ಪಡೆದವರಲ್ಲಿ ಹಾಗೂ ಈ ಮೊದಲು ಓಮೈಕ್ರಾನ್‌ ಸೋಂಕಿಗೆ ಒಳಗಾದವರಲ್ಲೂ ಮತ್ತೊಮ್ಮೆ ಸೋಂಕು ಕಾಣಿಸುವಂತೆ ಮಾಡುತ್ತವೆ. ಈ ಅಂಶವೇ ಕಳವಳಕಾರಿ. ಹಾಗಾಗಿ, ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.