ADVERTISEMENT

ಹೊಸ ನೀತಿಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಟ: ನರೇಂದ್ರ ಮೋದಿ

ಪಿಟಿಐ
Published 26 ನವೆಂಬರ್ 2020, 11:07 IST
Last Updated 26 ನವೆಂಬರ್ 2020, 11:07 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಕೆವಡಿಯಾ/ ಗುಜರಾತ್‌: ‘26/11ರ ಮುಂಬೈ ಮೇಲಿನ ದಾಳಿಯ ಗಾಯಗಳನ್ನು ಭಾರತ ಎಂದಿಗೂ ಮರೆಯುವುದಿಲ್ಲ. ದೇಶ ಹೊಸ ನೀತಿ ಮತ್ತು ಕಾರ್ಯವಿಧಾನಗೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ 80ನೇ ಸಮಾವೇಶದಲ್ಲಿ, ಮುಂಬೈ ದಾಳಿಯಲ್ಲಿ ಹುತಾತ್ಮರಾದವರನ್ನು ಅವರು ಸ್ಮರಿಸಿದರು.

‘2008ರ ಈ ದಿನ ಪಾಕಿಸ್ತಾನದಿಂದ ಕಳುಹಿಸಲಾದ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಿದ್ದರು. ವಿದೇಶಿಗರು, ಪೊಲೀಸರು ಸೇರಿದಂತೆ ಅನೇಕರು ಈ ದಾಳಿಗೆ ಬಲಿಯಾಗಿದ್ದರು. ಅವರಿಗೆ ಗೌರವ ಅರ್ಪಿಸುತ್ತೇನೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಗೂ ನಮಸ್ಕರಿಸುತ್ತೇನೆ’ ಎಂದು ಮೋದಿ ಹೇಳಿದರು.

ADVERTISEMENT

‘ಮುಂಬೈ ದಾಳಿಯಂತಹ ದೊಡ್ಡ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ ನಮ್ಮ ಭದ್ರತಾ ಪಡೆಗೆ ತಲೆಬಾಗುತ್ತೇನೆ. ಅವರು ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡುತ್ತಿದ್ದಾರೆ ಮತ್ತು ನಮ್ಮ ಗಡಿಗಳನ್ನು ಭದ್ರಪಡಿಸಲು ಬದ್ಧರಾಗಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.