ADVERTISEMENT

ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಹಮಾಸ್‌ ಕೂಡಾ ಕಾರಣ: ಭಾರತ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 21:52 IST
Last Updated 4 ನವೆಂಬರ್ 2023, 21:52 IST
<div class="paragraphs"><p>ನೆಲೆ ಕಳೆದುಕೊಂಡು ಸಾವಿರಾರು ಜನ</p></div>

ನೆಲೆ ಕಳೆದುಕೊಂಡು ಸಾವಿರಾರು ಜನ

   

ರಾಯಿಟರ್ಸ್‌ ಚಿತ್ರ

ನವದೆಹಲಿ: ಅಂತರರಾಷ್ಟ್ರೀಯ ಮಾನವೀಯ ಕಾಯ್ದೆಗೆ ಬದ್ಧರಾಗಿರಬೇಕು ಎಂದು ಇಸ್ರೇಲ್‌ಗೆ ಒತ್ತಾಯಿಸಿರುವ ಭಾರತ, ಇದೇ ಮೊದಲ ಬಾರಿಗೆ, ಪಶ್ಚಿಮ ಏಷ್ಯಾದಲ್ಲಿ ಈಗ ಮೂಡಿರುವ ಬಿಕ್ಕಟ್ಟಿಗೆ ಹಮಾಸ್‌ ಕೂಡಾ ಕಾರಣ ಎಂದು ಹೇಳಿದೆ.

ADVERTISEMENT

ಪಶ್ಚಿಮ ಏಷ್ಯಾದ ಬಿಕ್ಕಟ್ಟು ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಅವರು ದೂರವಾಣಿಯಲ್ಲಿ ಚರ್ಚಿಸಿದ್ದು, ಅದರ ಹಿಂದೆಯೇ ವಿದೇಶಾಂಗ ಸಚಿವಾಲಯ ಈ ಸಂಬಂಧ ಹೇಳಿಕೆ ನೀಡಿದೆ. 

ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಮತ್ತು ಇಸ್ರೇಲ್‌ ವಿದೇಶಾಂಗ ಸಚಿವರು ಶನಿವಾರ ಚರ್ಚಿಸಿದರು. ಆಗ, ಭಯೋತ್ಪಾದನೆ ನಿಗ್ರಹದಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದು, ಇಸ್ರೇಲ್‌ನಲ್ಲಿ ನಡೆದ ಉಗ್ರರ ದಾಳಿ ದಿಗ್ಭ್ರಮೆ ಮೂಡಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.