
ಪಿಟಿಐ
ಫ್ರಾನ್ಸ್–ಭಾರತ ಸೇನಾ ಅಧಿಕಾರಿಗಳು
ಸಂಗ್ರಹ ಚಿತ್ರ – ಪಿಟಿಐ
ನವದೆಹಲಿ: ಫ್ರಾನ್ಸ್ ವಾಯುಪಡೆಯೊಂದಿಗೆ ಭಾರತೀಯ ವಾಯುಸೇನೆಯು 12 ದಿನಗಳ ‘ಗರುಡ’ ಸಮರಾಭ್ಯಾಸ ನಡೆಸಲು ಮುಂದಾಗಿದೆ. ಇದಕ್ಕಾಗಿ ಭಾರತವು ತನ್ನ ಸುಖೋಯ್ ಯುದ್ಧ ವಿಮಾನವನ್ನು ಕಳುಹಿಸಿದೆ. ಸಮರಾಭ್ಯಾಸವು ಭಾನುವಾರದಿಂದ ಆರಂಭವಾಗಲಿದೆ.
‘ಯುದ್ಧದ ಅಥವಾ ಕಾರ್ಯಾಚರಣೆ ಸಂದರ್ಭದಲ್ಲಿ ಯಾವ ರೀತಿಯ ಕಾರ್ಯತಂತ್ರಗಳನ್ನು ಅನುಸರಿಸಬೇಕು ಎನ್ನುವ ಬಗ್ಗೆ ಪರಸ್ಪರರು ಮಾಹಿತಿ ಹಂಚಿಕೊಳ್ಳಲು ಈ ಸಮಾರಾಭ್ಯಾಸ ನಡೆಸಲಾಗುತ್ತಿದೆ’ ಎಂದು ಭಾರತೀಯ ವಾಯುಸೇನೆ ಹೇಳಿದೆ.
ಸುಖೋಯ್–30 ಯುದ್ಧ ವಿಮಾನವು ಫ್ರಾನ್ಸ್‌ನ ಯುದ್ಧ ವಿಮಾನದೊಂದಿಗೆ ಹಲವು ಸಂಕೀರ್ಣ ಸಂದರ್ಭಗಳ ಅಣುಕು ಅಭ್ಯಾಸ ನಡೆಸಲಿದೆ. ಈ ಅಭ್ಯಾಸಕ್ಕಾಗಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಸಿಬ್ಬಂದಿ ನ.10ರಂದು ಫ್ರಾನ್ಸ್ ತಲುಪಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.