ADVERTISEMENT

ಜಮ್ಮುವಿನಲ್ಲಿ ಪಾಕ್‌ ಡ್ರೋನ್ ಚಟುವಟಿಕೆ; ಪ್ರತಿಭಟನೆ ದಾಖಲಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 16:04 IST
Last Updated 24 ಜುಲೈ 2021, 16:04 IST
ಸುಚೇತ್‌ಗಡದ ಅಂತರರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ರೇಂಜರ್ಸ್ ನಡುವೆ ಸೆಕ್ಟರ್ ಕಮಾಂಡರ್ ಮಟ್ಟದ ಸಭೆ ಶನಿವಾರ ನಡೆಯಿತು (ಪಿಟಿಐ ಚಿತ್ರ).
ಸುಚೇತ್‌ಗಡದ ಅಂತರರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ರೇಂಜರ್ಸ್ ನಡುವೆ ಸೆಕ್ಟರ್ ಕಮಾಂಡರ್ ಮಟ್ಟದ ಸಭೆ ಶನಿವಾರ ನಡೆಯಿತು (ಪಿಟಿಐ ಚಿತ್ರ).   

ಜಮ್ಮು: ಜಮ್ಮು ಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ಡ್ರೋನ್ ಚಟುವಟಿಕೆಗಳ ಬಗ್ಗೆ ಭಾರತ ಶನಿವಾರಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ರೇಂಜರ್ಸ್ ನಡುವಿನ ಸೆಕ್ಟರ್ ಕಮಾಂಡರ್ ಮಟ್ಟದ ಸಭೆಯಲ್ಲಿ ತೀವ್ರ ಪ್ರತಿಭಟನೆ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಡಿಜಿಎಂಒಗಳು ಕದನ ವಿರಾಮ ಒಪ್ಪಂದ ಘೋಷಿಸಿದ (ಫೆಬ್ರುವರಿಯಲ್ಲಿ) ನಂತರ ಎರಡು ಗಡಿ ಕಾವಲು ಪಡೆಗಳ ನಡುವೆ ನಡೆದ ವಲಯ ಕಮಾಂಡರ್ ಮಟ್ಟದ ಮೊದಲ ಸಭೆ ಇದು’ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

ಜಮ್ಮು ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ಡ್ರೋನ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಿಎಸ್ಎಫ್ ಪ್ರತಿನಿಧಿಗಳು ತೀವ್ರ ಪ್ರತಿಭಟನೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸುಚೇತ್‌ಗಡ ಪ್ರದೇಶದ ಅಂತರರಾಷ್ಟ್ರೀಯ ಗಡಿ (ಐಬಿ)ಯಲ್ಲಿ ಪಾಕಿಸ್ತಾನ ರೇಂಜರ್ಸ್‌ನ ಕೋರಿಕೆಯ ಮೇರೆಗೆ ಈ ಸಭೆ ನಡೆಯಿತು. ಕಾರ್ಯಾಚರಣೆಯ ವಿಷಯಗಳನ್ನು ಪರಿಹರಿಸಲು ಅಗತ್ಯವಿದ್ದಾಗ ಫೀಲ್ಡ್‌ ಕಮಾಂಡರ್‌ಗಳ ನಡುವೆ ತ್ವರಿತ ಸಂವಹನ ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನದ ಡ್ರೋನ್ ಚಟುವಟಿಕೆಗಳು, ಭಯೋತ್ಪಾದಕ ಚಟುವಟಿಕೆಗಳು ಮತ್ತು ಗಡಿಯುದ್ದಕ್ಕೂ ಸುರಂಗಗಳನ್ನು ಅಗೆಯುವುದು ಮತ್ತು ಗಡಿ ನಿರ್ವಹಣೆಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಬಿಎಸ್‌ಎಫ್ ನಿಯೋಗವು ಮುಖ್ಯವಾಗಿ ಒತ್ತು ನೀಡಿ, ಚರ್ಚಿಸಿತು.

ಅಂತರರಾಷ್ಟ್ರೀಯ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡಿಕೊಳ್ಳಲು ಎರಡೂ ಕಡೆಯವರು ತಮ್ಮ ಬದ್ಧತೆ ವ್ಯಕ್ತಪಡಿಸಿದ್ದಾರೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.