ADVERTISEMENT

Covid India Update| 24 ಗಂಟೆಯಲ್ಲಿ 2,483 ಪ್ರಕರಣ ಪತ್ತೆ: 1,399 ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಏಪ್ರಿಲ್ 2022, 6:11 IST
Last Updated 26 ಏಪ್ರಿಲ್ 2022, 6:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,483 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸೋಮವಾರಕ್ಕೆ ಹೋಲಿಸಿಕೊಂಡರೆ ಮಂಗಳವಾರ ಪ್ರಕರಣಗಳಲ್ಲಿ ಅಲ್ಪ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಮವಾರ 2,541 ಪ್ರಕರಣಗಳು ಪತ್ತೆಯಾಗಿದ್ದವು.

ಆದರೆ, ಒಂದು ದಿನದ ಅವಧಿಯಲ್ಲಿ ಏಕಾಏಕಿ1,399 ಸಾವುಗಳು ವರದಿಯಾಗಿವೆ.ಈ ಪೈಕಿ ಅಸ್ಸಾಂನಲ್ಲೇ 1,347 ಸಾವುಗಳು ಪತ್ತೆಯಾಗಿವೆಎಂದು ಸಚಿವಾಲಯ ತಿಳಿಸಿದೆ. ಹಲವು ದಿನಗಳಿಂದ ನಮೂದಿಸದ ಸಾವಿನ ಸಂಖ್ಯೆಯನ್ನು ಒಂದೇ ಬಾರಿಗೆಸೇರಿಸಿಅಸ್ಸಾಂ ಸೋಮವಾರ ಬುಲೆಟಿನ್‌ ಬಿಡುಗಡೆ ಮಾಡಿತ್ತು. ಹೀಗಾಗಿ, ಮರಣ ಸಂಖ್ಯೆ ದಿಢೀರ್‌ ಏರಿದೆ. ಇದರೊಂದಿಗೆದೇಶದಾದ್ಯಂತ ಈ ವರೆಗೆ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 5,23,622ಕ್ಕೆ ಏರಿದೆ.

ADVERTISEMENT

ಇನ್ನು ದೇಶದ ಸಕ್ರಿಯ ಪ್ರಕರಣಗಳು 15,636ಕ್ಕೆ ಇಳಿದಿವೆ. 24 ಗಂಟೆಗಳಲ್ಲಿ 1,970 ರೋಗಿಗಳು ಚೇತರಿಸಿಕೊಂಡಿದ್ದಾರೆ. ಈ ವರೆಗೆ ಕೋವಿಡ್‌ನಿಂದ 4,25,23,311 ಮಂದಿ ಚೇತರಿಸಿಕೊಂಡಿದ್ದಾರೆ. ದೈನಂದಿನ ಪಾಸಿಟಿವಿಟಿ ದರವು ಶೇ 00.55ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.