ADVERTISEMENT

ಮಾರಿಷಸ್‌ಗೆ ₹6,000 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ

ಪಿಟಿಐ
Published 11 ಸೆಪ್ಟೆಂಬರ್ 2025, 22:57 IST
Last Updated 11 ಸೆಪ್ಟೆಂಬರ್ 2025, 22:57 IST
<div class="paragraphs"><p>ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮಗುಲಾಂ &nbsp;<br></p></div>

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮಗುಲಾಂ  

   

ಪಿಟಿಐ ಚಿತ್ರ

ADVERTISEMENT

ವಾರಾಣಸಿ/ ನವದೆಹಲಿ: ಭಾರತವು ಮಾರಿಷಸ್‌ಗೆ ₹6,000 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ ಅನ್ನು ಗುರುವಾರ ಘೋಷಿಸಿದೆ. ಕಡಲ ಭದ್ರತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಏಳು ಒಪ್ಪಂ‌ದಗಳಿಗೆ ಸಹಿ ಹಾಕಿದೆ.

ಮಾರಿಷಸ್ ಪ್ರಧಾನಿ  ನವೀನ್‌ಚಂದ್ರ ರಾಮಗುಲಾಂ ಅವರೊಂದಿಗೆ ವಾರಾಣಸಿಯಲ್ಲಿ ಗುರುವಾರ ಮಾತುಕತೆ ನಡೆಸಿದ ಮೋದಿ, ‘ಭಾರತ ಮತ್ತು ಮಾರಿಷಸ್‌ ಎರಡು ದೇಶಗಳಾಗಿದ್ದರೂ ಅವುಗಳ ಕನಸು ಮತ್ತು ಗುರಿ ಒಂದೇ. ಭಾರತ ಮತ್ತು ಮಾರಿಷಸ್‌ ಪಾಲುದಾರ ರಾಷ್ಟ್ರಗಳಷ್ಟೇ ಅಲ್ಲ, ಒಂದೇ ಕುಟುಂಬದ ಸದಸ್ಯರಂತೆ. ಮಾರಿಷಸ್‌ನ ವಿಶೇಷ ಆರ್ಥಿಕ ವಲಯದ ಭದ್ರತೆ ಮತ್ತು ಕಡಲ ಸಾಮರ್ಥ್ಯವನ್ನು ಬಲಪಡಿಸಲು ಭಾರತ ಸಂಪೂರ್ಣ ಬದ್ಧವಾಗಿದೆ’ ಎಂದು ಅವರು ಹೇಳಿದರು.

ಮಾರಿಷಸ್‌ನಲ್ಲಿ ಯುಪಿಐ ಮತ್ತು ರುಪೇ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ ಬಳಿಕ ಸ್ಥಳೀಯ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಸುಗಮಗೊಳಿಸಲು ಭಾರತ ಮತ್ತು ಮಾರಿಷಸ್‌ ಕೆಲಸ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ವಿಶೇಷ ಆರ್ಥಿಕ ಪ್ಯಾಕೇಜ್‌ ಅಡಿಯಲ್ಲಿ, ಬಂದರು, ವಿಮಾನ ನಿಲ್ದಾಣ, ರಸ್ತೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಬಲಪಡಿಸಲು ಹಾಗೂ ಹೊಸ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಿರ್ಮಿಸುವುದು ಸೇರಿದಂತೆ ಕನಿಷ್ಠ 10 ಯೋಜನೆಗಳನ್ನು ಕಾರ್ಯಗತಗೊಳಿಸಲು ಭಾರತ ಮಾರಿಷಸ್‌ಗೆ ಸಹಾಯ ಮಾಡಲಿದೆ. 

ಈ ಪ್ಯಾಕೇಜ್‌ ಕೇವಲ ಸಹಾಯವಲ್ಲ, ಬದಲಿಗೆ ಭವಿಷ್ಯದ ಹೂಡಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಈ ಏಳು ಒಪ್ಪಂದಗಳು ಶಿಕ್ಷಣ, ವಿದ್ಯುತ್, ಜಲವಿಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಅನುಕೂಲವಾಗಲಿವೆ.

ರಾಮಗುಲಾಂ ಅವರು ಸೆ.9ರಂದು ಮುಂಬೈಗೆ ಬಂದಿದ್ದು, ಸೆ.16ರವರೆಗೆ ಅವರು ಭಾರತದಲ್ಲಿ ಇರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.