ADVERTISEMENT

ಡ್ರೋನ್‌: ₹2 ಸಾವಿರ ಕೋಟಿಯ ಪ್ರೋತ್ಸಾಹಕ ಯೋಜನೆ

ರಾಯಿಟರ್ಸ್
Published 4 ಜುಲೈ 2025, 19:00 IST
Last Updated 4 ಜುಲೈ 2025, 19:00 IST
-
-   

ನವದೆಹಲಿ: ನಾಗರಿಕ ಉದ್ದೇಶಕ್ಕೆ ಹಾಗೂ ಭದ್ರತಾಪಡೆಗಳಿಗಾಗಿ ಡ್ರೋನ್‌ ಉತ್ಪಾದನೆ ಹೆಚ್ಚಿಸುವುದಕ್ಕಾಗಿ ಕೇಂದ್ರ ಸರ್ಕಾರ ₹2 ಸಾವಿರ ಕೋಟಿ (234 ಮಿಲಿಯನ್‌ ಡಾಲರ್) ಮೊತ್ತದ ಪ್ರೋತ್ಸಾಹಕ ಯೋಜನೆ ಆರಂಭಿಸಲಿದೆ.

ಪಾಕಿಸ್ತಾನದ ಜೊತೆ ಇತ್ತೀಚಿನ ಸಂಘರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಮುಂದಾಗಿದೆ. ಸಂಘರ್ಷದ ವೇಳೆ, ಪಾಕಿಸ್ತಾನವು ಚೀನಾ ಮತ್ತು ಟರ್ಕಿ ನೆರವಿನಿಂದ ನಿರ್ಮಿತ ಡ್ರೋನ್‌ಗಳನ್ನು ಬಳಸಿತ್ತು. ಇದು ಕೂಡ ಇಂತಹ ಕಾರ್ಯಕ್ರಮ ಆರಂಭಿಸುವುದಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.

ಅಲ್ಲದೇ, ಡ್ರೋನ್‌ ತಯಾರಿಕೆಗೆ ಬಳಸುವ ಬಿಡಿಭಾಗಗಳ ಆಮದು ತಗ್ಗಿಸುವ ಉದ್ದೇಶವನ್ನು ಕೂಡ ಈ ಕಾರ್ಯಕ್ರಮ ಒಳಗೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.