ADVERTISEMENT

ಮಾಲ್ಡೀವ್ಸ್‌ಗೆ ಡಾರ್ನಿಯರ್‌ ಕಣ್ಗಾವಲು ವಿಮಾನಗಳನ್ನು ನೀಡಿದ ಭಾರತ

ಪಿಟಿಐ
Published 29 ಸೆಪ್ಟೆಂಬರ್ 2020, 16:45 IST
Last Updated 29 ಸೆಪ್ಟೆಂಬರ್ 2020, 16:45 IST
ಡಾರ್ನಿಯರ್‌ ಕಣ್ಗಾವಲು ವಿಮಾನ
ಡಾರ್ನಿಯರ್‌ ಕಣ್ಗಾವಲು ವಿಮಾನ   

ದೆಹಲಿ: ಭಾರತವು ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೆ ಡಾರ್ನಿಯರ್ ವಿಮಾನಗಳನ್ನು ಕೊಡುಗೆಯಾಗಿ ನೀಡಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ದ್ವೀಪ ರಾಷ್ಟ್ರವು ತನ್ನ ವಿಶೇಷ ಆರ್ಥಿಕ ವಲಯದ ಮೇಲೆ ಕಣ್ಗಾವಲು ಹೆಚ್ಚಿಸಲು ಮತ್ತು ಸಾಗರ ಭಯೋತ್ಪಾದನಾ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಈ ವಿಮಾನಗಳನ್ನು ಪೂರೈಸಲಾಗಿದೆ ಎಂದು ಸರ್ಕಾರ ಹೇಳಿದೆ.

ವಿಮಾನವನ್ನು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಂಡಿಎನ್ಎಫ್) ನಿರ್ವಹಿಸಲಿದೆ. ಅದರ ವೆಚ್ಚವನ್ನು ಭಾರತ ಭಾರತ ಭರಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

2016ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ, ಮಾಲ್ಡೀವ್ಸ್‌ನ ಅಂದಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ಡಾರ್ನಿಯರ್‌ವಿಮಾನಗಳನ್ನು ಪೂರೈಸುವಂತೆ ಕೋರಿಕೆ ಸಲ್ಲಿಸಿದ್ದರು.

ADVERTISEMENT

ವಿಮಾನದ ನಿರ್ವಹಣೆಗಾಗಿ ಪೈಲಟ್‌ಗಳು, ವಿಮಾನ ವೀಕ್ಷಕರು ಮತ್ತು ಎಂಜಿನಿಯರ್‌ಗಳು ಸೇರಿದಂತೆ ಮಾಲ್ಡೀವ್ಸ್‌ನ ಏಳು ಮಿಲಿಟರಿ ಸಿಬ್ಬಂದಿಗೆ ಭಾರತೀಯ ನೌಕಾಪಡೆಯಿಂದ ತರಬೇತಿ ಕೊಡಲಾಗಿದೆ.

‘ಈ ವಿಮಾನವನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಅಕ್ರಮ, ವರದಿಯಾಗದ ಮತ್ತು ಅನಿಯಂತ್ರಿತ ಮೀನುಗಾರಿಕೆ ವಿರುದ್ಧದ ಕಾರ್ಯಾಚರಣೆಗಳಲ್ಲಿಯೂ ಬಳಸಲಾಗುವುದು. ಮಾದಕವಸ್ತು ಕಳ್ಳಸಾಗಣೆದಾರರ ಚಲನವಲನ ಕುರಿತು ಭಾರತ ನಿಯಮಿತವಾಗಿ ಮಾಲ್ಡೀವ್ಸ್‌ನೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಿದೆ,’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.