ADVERTISEMENT

India Covid-19 Update: ಕೋವಿಡ್‌ ಸಕ್ರಿಯ ಪ್ರಕರಣ 1.28 ಲಕ್ಷಕ್ಕೆ ಇಳಿಕೆ

ಪಿಟಿಐ
Published 17 ನವೆಂಬರ್ 2021, 5:25 IST
Last Updated 17 ನವೆಂಬರ್ 2021, 5:25 IST
.
.   

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,197 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳು 1,28,555ಕ್ಕೆ ಕುಸಿದಿದೆ. ಇದು 527 ದಿನಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಂಕಿನಿಂದ 301 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ4,64,153ಕ್ಕೆ ಏರಿಕೆಯಾಗಿದೆ. ಒಟ್ಟು ಕೋವಿಡ್ ಪೀಡಿತರ ಸಂಖ್ಯೆ3,44,66,598 ಆಗಿದೆ.

ಸಕ್ರಿಯ ಪ್ರಕರಣಗಳ ಪ್ರಮಾಣ ಒಟ್ಟು ಪೀಡಿತರ ಪ್ರಮಾಣಕ್ಕೆ ಹೋಲಿಸಿದರೆ ಶೇ 0.37ರಷ್ಟು ಮಾತ್ರ ಇದೆ. ಗುಣಮುಖರಾದವರ ಪ್ರಮಾಣ ಶೇ 98.28ರಷ್ಟಿದೆ.

ADVERTISEMENT

ಕೋವಿಡ್ ಸಾವಿನಲ್ಲಿ ಕೇರಳವೇ ಮುಂಚೂಣಿಯಲ್ಲಿದೆ. ಒಟ್ಟು 301 ಸಾವುಗಳ ಪೈಕಿ ಕೇರಳದ ಪಾಲು 210 ಇದ್ದರೆ, ಮಹಾರಾಷ್ಟ್ರದ ಪಾಲು 34 ಇದೆ.

ಒಟ್ಟು ಸಾವಿನ ಪ್ರಮಾಣ ಹೋಲಿಸಿದರೆ, ಮಹಾರಾಷ್ಟ್ರದಲ್ಲಿ 1.40 ಲಕ್ಷ, ಕರ್ನಾಟಕದಲ್ಲಿ38,153, ತಮಿಳುನಾಡಿನಲ್ಲಿ 36,311 ಹಾಗೂ ಕೇರಳದಲ್ಲಿ 36,087 ಸಾವುಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.