ADVERTISEMENT

ಅರುಣಾಚಲಕ್ಕೆ ಅಮಿತ್‌ ಶಾ ಭೇಟಿ: ಚೀನಾ ಆಕ್ಷೇಪ ತಿರಸ್ಕರಿಸಿದ ಭಾರತ

ಪಿಟಿಐ
Published 11 ಏಪ್ರಿಲ್ 2023, 13:41 IST
Last Updated 11 ಏಪ್ರಿಲ್ 2023, 13:41 IST
ಅರಿಂದಮ್ ಬಾಗ್ಚಿ
ಅರಿಂದಮ್ ಬಾಗ್ಚಿ   

ನವದೆಹಲಿ: ಅರುಣಾಚಲ ಪ್ರದೇಶಕ್ಕೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಭೇಟಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾದ ನಡೆಗೆ ತಿರುಗೇಟು ನೀಡಿರುವ ಭಾರತವು, ಅರುಣಾಚಲ ಪ್ರದೇಶವು ಹಿಂದೆಯೂ, ಇಂದೂ, ಮುಂದೆಯೂ ಹಾಗೂ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿರಲಿದೆ ಎಂದು ಹೇಳಿದೆ.

ಶಾ ಅವರ ಭೇಟಿಗೆ ಚೀನಾವು ಕಾರಣವಿಲ್ಲದೆ ಆಕ್ಷೇಪ ಎತ್ತಿದೆ ಮತ್ತು ಇದರಿಂದ ವಾಸ್ತವ ಬದಲಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಅವರು ಹೇಳಿದ್ದಾರೆ.

‘ಚೀನಾದ ಅಧಿಕೃತ ವಕ್ತಾರರು ನೀಡಿರುವ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ಅಲ್ಲಗಳೆಯುತ್ತೇವೆ. ಭಾರತದ ನಾಯಕರು ಇತರ ರಾಜ್ಯಗಳಿಗೆ ಭೇಟಿ ನೀಡಿದಂತೆ ಅರುಣಾಚಲ ಪ್ರದೇಶಕ್ಕೂ ಭೇಟಿ ನೀಡುತ್ತಾರೆ’ ಎಂದಿದ್ದಾರೆ.

ADVERTISEMENT

ಅರುಣಾಚಲ ಪ್ರದೇಶದ ಗಡಿ ಗ್ರಾಮವಾಗಿರುವ ಕಿಬಿಥೂಗೆ ಸೋಮವಾರ ಭೇಟಿ ನೀಡಿದ್ದ ಅಮಿತ್‌ ಶಾ ಅವರು, ‘ಭಾರತದ ಪ್ರಾದೇಶಿಕ ಸಮಗ್ರತೆಯ ಮೇಲೆ ಕೆಟ್ಟ ದೃಷ್ಟಿ ಬೀರಲು ಮತ್ತು ನಮ್ಮ ದೇಶದ ಒಂದು ಅಂಗುಲ ನೆಲವನ್ನೂ ವಶಪಡಿಸಿಕೊಳ್ಳಲು ಯಾರೂ ಧೈರ್ಯ ತೋರಲಾರರು’ ಎಂದಿದ್ದರು.

ಭಾರತದ ಗಡಿಯನ್ನು ಯಾರು ಬೇಕಾದರೂ ಅತಿಕ್ರಮಿಸಬಹುದು ಎಂಬ ಯುಗ ಕಳೆದಿದೆ ಎಂದೂ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.